Tuesday, January 21, 2025
ಸುದ್ದಿ

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ವಾರ್ಷಿಕ ಆಚರಣೆ – ಕಹಳೆ ನ್ಯೂಸ್

75 ವರ್ಷಗಳ ಸುದೀರ್ಘ ಪರಂಪರೆಯ ಮುಳಿಯ ಜುವೆಲ್ಸ್, ಬೆಳ್ತಂಗಡಿಯಲ್ಲಿ ಮೊದಲ ವರ್ಷದ “ವಾರ್ಷಿಕ ದಿನಾಚರಣೆ”ಯನ್ನು ಆಚರಿಸಿತು. ಲಕ್ಷ್ಮಿ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಆಡಳಿತ ನಿರ್ದೇಶಕ ಶ್ರೀ ಕೃಷ್ಣನಾರಾಯಣ ಮುಳಿಯರವರು “ಕೇವಲ ಒಂದು ವರ್ಷದ ನಮ್ಮ ಮುಳಿಯ ನಡಿಗೆಯಲ್ಲಿ, ಬೆಳ್ತಂಗಡಿ ಹಾಗೂ ಆಸುಪಾಸಿನ ಜನ ನಮ್ಮನ್ನು ಮೆಚ್ಚಿ ಆಶೀರ್ವದಿಸಿದ್ದೀರಿ, ಚಿನ್ನ ಕೊಳ್ಳುವ ಅಪೂರ್ವ ಅನುಭವ ನೀಡುವ ನಮ್ಮ ವಿಶೇಷತೆಯನ್ನ ಮೆಚ್ಚಿ ಬೆಳೆಸಿದ್ದೀರಿ, ವಂದನೆಗಳು” ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ನಡೆದ ಗ್ರಾಹಕ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಚೇರ್ಮೇನ್ & ಮ್ಯಾನೇಜಿಂಗ್ ಡೈರೆಕ್ಟರ್ ಕೇಶವ ಪ್ರಸಾದ್ ಮುಳಿಯರವರು “ಬೆಳ್ತಂಗಡಿಯ ಸಮಾನ ಮನಸ್ಕ ಸಂಘಟನೆಗಳ ಜೊತೆಗೆ ಸೇರಿ ಮುಳಿಯ ಸಹಭಾಗಿತ್ವದ ಸಮಾಜಮುಖಿ ಕಾರ್ಯಕ್ರಮಗಳನ್ನ ನಡೆಸೋಣ ಎಂದರು. ಹಾಗೆಯೇ “ಬೆಳ್ತಂಗಡಿ ಗಾನ ಕೋಗಿಲೆ” ಎಂಬ ಹವ್ಯಾಸಿ ಹಾಡುಗಾರರನ್ನು ಹಳ್ಳಿ ಹಳ್ಳಿಗಳಲ್ಲಿ ಗುರುತಿಸುವ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು” ಎಂದರು. ಸಂವಾದ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಅವರು ಮುಳಿಯ ಜ್ಯುವೆಲ್ಸ್ ಗೆ ಶುಭ ಹಾರೈಸಿದರು. ಶಾಖಾ ಪ್ರಬಂಧಕರಾದ ಪ್ರವೀಣ್ ಕೂಡ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು