ಫಾಟ್ನಾ; ಮುಝಫ್ಪರ್ ನಲ್ಲಿ ಸೇರಿದಂತೆ ಬಿಹಾರದಲ್ಲಿ ಇನ್ನು ನಿಲ್ಲದ ಮರಣ ಮೃದಂಗ. ಮಾರಕ ಮೆದುಳು ಜ್ವರಕ್ಕೆ ಮತ್ತೇ ಮೂರು ಮಕ್ಕಳನ್ನು ಪಡೆದುಕೊಂಡಿದೆ. ಈ ವೈರಸ್ ರೋಗಕ್ಕೆ ಬಲಿಯಾದವರ ಸಂಖ್ಯೆ 141 ಕ್ಕೆ ಏರಿದೆ.
ರಾಜ್ಯದ 8 ಜಿಲ್ಲೆಗಳಲ್ಲಿ ಮೆದುಳು ಜ್ವರ ಕಾಣಿಸಿಕೊಂಡಿದೆ. ಮುಝಫ್ಪರ್ ಪುರದಲ್ಲಿ 437 ಮಂದಿಗೆ ಸೋಂಕು ತಗಲಿದೆ, ಈಗಾಗಲೇ 85 ಮಕ್ಕಳು ಮೃತಪಟ್ಟದ್ದಾರೆ. ಆರೋಗ್ಯ ಇಲಾಖೆ ಅಧಿಕಾರಿಗಳು ಶುಕ್ರವಾರ ಮುಝಫ್ಪರ್ ಪುರಕ್ಕೇ ಭೇಟಿ ನೀಡಿ, ಶ್ರೀ ಕೃಷ್ಣ ಕಾಲೇಜು ಆಸ್ಪತ್ರೆಯ ಮಕ್ಕಳ ತೀವ್ರ ನಿಗಾ ಘಟಕಗಳಲ್ಲಿ ಪರೀಕ್ಷಾ ಸಾಧನವನ್ನು ಅಳವಡಿಸಲು ಸೂಚಿಸಿದ್ದಾರೆ.
ಕೇಂದ್ರ ತಂಡದ ಸಲಹೆಯಂತೆ ಎಕ್ಸರ್ ಮಿಷನ್, ಅಲ್ಟ್ರಾ ಸೋನೊಗ್ರಫಿ ಮತ್ತು ಎಲೆಕ್ಟ್ರೊಲೈಟ್ ಟೆಸ್ಟರಗಳನ್ನು ಆಸ್ಪತ್ರೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಈ ಸಾಧನಗಳು ಆಸ್ಪತ್ರೆಯಲ್ಲಿ ಇದ್ದರೆ, ತೀವ್ರಾ ನಿಗಾ ಘಟಕದಿಂದ ತಪಾಸಣೆಗಾಗಿ ಮಕ್ಕಳನ್ನು ರವಾನಿಸುವಂತೆ ಇಲ್ಲ ಎಂದು ಕೇಂದ್ರ ತಂಡ ಸೂಚಿಸಿದೆ ಎಂದು ಬಿಹಾರದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಕುಮಾರ್ ತಿಳಿಸಿದ್ದಾರೆ.