Tuesday, January 21, 2025
ಸಿನಿಮಾ

ಪೀಕು ನಿರ್ದೇಶಕನ ಜೊತೆ ಮತ್ತೆ ಒಂದಾದ ಬಿಗ್ ಬಿ – ಕಹಳೆ ನ್ಯೂಸ್

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಈಗ ಮತ್ತೊಮ್ಮೆ ವಿಭಿನ್ನ ಗೆಟಪ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಉದ್ದ ದಾಡಿ ಬಿಟ್ಟು, ಹಣ್ಣು ಹಣ್ಣು ಮುದುಕನಾಗಿ ಅಮಿತಾಭ್ ಕಾಣಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಿತ್ರದಿಂದ ಚಿತ್ರಕ್ಕೆ ಸಾಕಷ್ಟು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಮಿತಾಭ್ ಈಗ ‘ಗುಲಾಬೋ ಸಿತಾಬೋ’ ಚಿತ್ರದಲ್ಲಿ ಮತ್ತೊಂದು ಅವತಾರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಅಮಿತಾಭ್‍ಗೆ ಈಗ 76 ವಯಸ್ಸಾಗಿದ್ದರೂ, ಅವರ ನಟನಾ ಹಸಿವು ಎಷ್ಟಿರ ಮಟ್ಟಿಗಿದೆ ಎಂದರೆ, ಅವರ ಪಾತ್ರಗಳ ಮೂಲಕವೇ ಗೊತ್ತಾಗುತ್ತಿದೆ. ಪೀಕು, ಶಮಿತಾಭ್, ಪಿಂಕ್ ಮುಂತಾದ ಚಿತ್ರಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುವ ಜೊತೆಗೆ ಭಾವತಾನ್ಮಕ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತ ಬಂದಿರುವ ಬಿಗ್ ಬಿ ಈಗ ಮತ್ತೊಮ್ಮೆ ಹೊಸ ಅವತಾರದಲ್ಲಿ ದರ್ಶನ ನೀಡಿರುವುದು ಅಭಿಮಾನಿಗಳಿಗೆ ಸಖತ್ ಥ್ರಿಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರದಲ್ಲಿ ಅಮಿತಾಭ್‍ಗೆ ವಿಶೇಷವಾದ ಮೇಕಪ್ ಮಾಡಿಸಲಾಗಿದೆ. ದಪ್ಪನೆಯ ಮೂಗು ಮತ್ತು ವಿಭಿನ್ನ ಕಾಸ್ಟ್ಯೂಮ್ ಧರಿಸಿರುವ ಅಮಿತಾಭ್ ಫೋಟೋ, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೀಕು ನಂತರ ಶೂಜಿತ್ ಸರ್ಕಾರ್ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ.

‘ಗುಲಾಬೋ ಸಿತಾಬೋ’ ಚಿತ್ರದಲ್ಲಿ ನಟ ಆಯುಷ್ಮಾನ್ ಖುರಾನ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಲಿದ್ದಾರೆ. ಸದ್ಯ ಅಮಿತಾಭ್ ವಿಭಿನ್ನ ಗೆಟಪ್ ಮೂಲಕವೇ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿರುವ ‘ಗುಲಾಬೋ ಸಿತಾಬೋ’ ಮುಂದಿನ ವರ್ಷ ಏಪ್ರಿಲ್‍ಗೆ ತೆರೆಗೆ ಬರಲಿದೆ.