Tuesday, January 21, 2025
ಸುದ್ದಿ

ಸರಸ್ವತೀ ಪ್ರೌಢಶಾಲೆ ಹಾಗೂ ಪದವಿಪೂರ್ವ ವಿಭಾಗ: ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಯೋಗಾಭ್ಯಾಸ ಉತ್ತಮ ಮಾರ್ಗ: ರಾಮಚಂದ್ರ ಕೋಲ್ಪೆ – ಕಹಳೆ ನ್ಯೂಸ್

ಮಾನಸಿಕ ಹಾಗೂ ದೈಹಿಕ ಕ್ಷಮತೆಗೆ ಯೋಗಾಭ್ಯಾಸ ಉತ್ತಮ ಮಾರ್ಗ, ಇದರ ನಿರಂತರ ಅಭ್ಯಾಸದಿಂದ ಸತ್‍ ಚಿಂತನೆ ನಮ್ಮಲ್ಲಿ ಮೂಡಲು ಸಾಧ್ಯವಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಡಬ ಮಂಡಲ ಕಾರ್ಯವಾಹ ರಾಮಚಂದ್ರ ಕೋಲ್ಪೆ ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಸರಸ್ವತೀ ಪ್ರೌಢಶಾಲೆ ಹಾಗೂ ಪದವಿಪೂರ್ವ ವಿಭಾಗದಿಂದ ಆಯೋಜಿಸಿದ ಯೋಗದಿನದ ಪ್ರಯುಕ್ತ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸರಸ್ವತೀ ಸಮೂಹ ಸಂಸ್ಥೆಗಳ ನಿರ್ದೇಶಕರಾದ ಶ್ರೀ ಉಮೇಶ್ ಶೆಟ್ಟಿ ಸಾಯಿರಾಮ್ ಮಾತನಾಡಿ ಸರ್ವೇ ಜನಾ ಸಖಿನೋ ಭವಂತು ಎಂದು ಲೋಕದ ಹಿತವನ್ನು ಬಯಸುವ ದೇಶ ಭಾರತ. ಅಂತಹ ಚಿಂತನೆ ಯೋಗದ ಮೂಲಕ ಇಂದು ಇಡೀ ಜಗತ್ತಿಗೆ ಪಸರಿಸುವುದು ಸಂತಸದ ಸಂಗತಿ ಎಂದರು. ಪದವಿಪೂರ್ವ ವಿಭಾಗದ ಪ್ರಾಂಶುಪಾಲ ಮಹೇಶ್ ನಿಟಿಲಾಪುರ ಉಪಸ್ಥಿತರಿದ್ದರು. ಪ್ರೌಢ ವಿಭಾಗದ ಶಿಕ್ಷಕಿ ಜಲಜಾಕ್ಷಿ ಪ್ರಸ್ತಾವಣೆಗೈದರು. ವಿದ್ಯಾರ್ಥಿನಿ ಶ್ರಾವ್ಯ 10ನೇ ತರಗತಿ ಸ್ವಾಗತಿಸಿ, ಹರ್ಷಿತಾ 10ನೇ ತರಗತಿ ವಂದಿಸಿ, ನಿಶ್ಮಿತಾ ದ್ವಿತೀಯ ಪಿಯುಸಿ ಕಾರ್ಯಕ್ರಮ ನಿರೂಪಿಸಿದರು.