ಮಂಗಳೂರು: ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ನೀಡುವ ರಾಷ್ಟ್ರಪತಿಗಳ `ಶ್ಲಾಘನೀಯ’ ಸೇವಾ ಪದಕ, `ವಿಶಿಷ್ಟ’ ಸೇವಾ ಪದಕಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಪೊಲೀಸ್ ಅಧಿಕಾರಿಗಳು ಭಾಜನರಾಗಿದ್ದಾರೆ.
ಮಂಗಳೂರು ಎಸಿಪಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಉದಯ್ ನಾಯಕ್, ಮಂಗಳೂರು ನಗರ ಸಿಸಿಆರ್ ಬಿ ಎಸಿಪಿ ವಿನಯ್ ಎ ಗಾಂವ್ಕರ್, ಎಸಿಬಿ ಡಿವೈಎಸ್ಪಿ ಸುಧೀರ್ ಎಮ್ ಹೆಗ್ಡೆ, ಭಟ್ಕಳ ಡಿವೈಎಸ್ಪಿಯಾಗಿರುವ ವೆಲಂಟೈನ್ ಡಿಸೋಜಾ ಅವರು ರಾಷ್ಟ್ರಪತಿಗಳ ಪೊಲೀಸ್ ಪದಕಕ್ಕೆ ಆಯ್ಕೆಯಾಗಿದ್ದಾರೆ.
ಡಿಜಿಪಿ ಡಾ. ಎಸ್ ಪರಶಿವಮೂರ್ತಿ ಅವರು ಪದಕ ಪಡೆದ ಪೊಲೀಸ್ ಅಧಿಕಾರಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಜುಲೈ 5 ರಂದು ಬೆಂಗಳೂರಿನ ರಾಜಭವನದ ಗಾಜಿನ ಮನೆಯಲ್ಲಿ ಪದ ಪ್ರದಾನ ಮಾಡಲಾಗುವುದು.