Wednesday, January 22, 2025
ಸುದ್ದಿ

ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆ ಪ್ರಕರಣ; ಆರೋಪಿಗಳನ್ನು ಬಂಧಿಸಿದ ವಿಟ್ಲ ಠಾಣಾ ಪೊಲೀಸರು – ಕಹಳೆ ನ್ಯೂಸ್

ಬಂಟ್ವಾಳ: ಕೆಎಸ್‌ಆರ್‌ಟಿಸಿ ಬಸ್ ಚಾಲಕನಿಗೆ ಹಲ್ಲೆ ಪ್ರಕರಣ; ಆರೋಪಿಗಳನ್ನು ಬಂಧಿಸಿದ ವಿಟ್ಲ ಠಾಣಾ ಪೊಲೀಸರು  ಬಸ್ ಚಾಲಕನಿಗೆ ಮೂರು ವ್ಯಕ್ತಿಗಳು ಅವ್ಯಾಚ ಶಬ್ದಗಳಿಂದ ನಿಂದಿಸಿದ ಘಟನೆ ನಡೆದಿದೆ. ಮೂವರು ವ್ಯಕ್ತಿಗಳು ದ್ವಿಚಕ್ರ ವಾಹನದಲ್ಲಿ ಬಂದು ಬಸ್ಸನ್ನು ಓವರ್ ಟೇಕ್ ಮಾಡಿ ಬಸ್ಸಿನ ಮುಂದೆ ವಾಹನ ನಿಲ್ಲಿಸಿ ಅಕ್ರಮ ತಡೆ ಒಡ್ಡಿ, ಬಸ್ಸಿನೊಳಗೆ ಬಂದು ಮೈಗೆ ಕೈ ಹಾಕಿದ್ದಾರೆ. ಸಮವಸ್ತ್ರವನ್ನು ಎಳೆದು ಹಾಕಿದ್ದಲ್ಲದೆ ನಂತರ ಅವ್ಯಾಚ ಶಬ್ಧಗಳಿಂದ ಬೈದಿದ್ದಾರೆ. ಒಬ್ಬಾತನು ಹಣೆಗೆ ಹೊಡೆದಿದ್ದಾನೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗೇ ಜೀವ ಸಹಿತ ಬಿಡುವುದಿಲ್ಲವಾಗಿ ಬೆದರಿಕೆ ಒಡ್ಡಿದಾಗ ಬಸ್ಸಿನ ನಿರ್ವಾಹಕರು ಹಾಗೂ ಪ್ರಯಾಣಿಕರು ಹಲ್ಲೆ ಮಾಡದಂತೆ ತಡೆಹಿಡಿದ್ದಾರೆ. ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದು ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಆರೋಪಿಗಳನ್ನು ಶಿಯಾಬುದ್ದೀನ್, ಮೊಹಮ್ಮದ್ ಇಲಿಯಾಸ್, ಜಾಸೀರ್, ಮೊಹಮ್ಮದ್ ಶಾಫಿ ಎಂದು ಶಂಕಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು