Thursday, January 23, 2025
ಸುದ್ದಿ

ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ) ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಬಾರ್ಯ ಪ್ರಾಥಮಿಕ ಶಾಲೆಯಲ್ಲಿ ಗಿಡ ವಿತರಣೆ ಮತ್ತು ವನಮಹೋತ್ಸಹ ಕಾರ್ಯಕ್ರಮ – ಕಹಳೆ ನ್ಯೂಸ್

ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ) ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ಬಾರ್ಯ ಪ್ರಾಥಮಿಕ ಶಾಲೆಯಲ್ಲಿ ಗಿಡ ವಿತರಣೆ ಮತ್ತು ವನಮಹೋತ್ಸಹ ಕಾರ್ಯಕ್ರಮ ಜೂನ್ 22 ರಂದು ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಮಾತನಾಡಿದ ಆಶೋಕ್ ಗಿಡ ನೆಟ್ಟರೆ ಸಾಲದು. ಅದರ ಲಾಲನೆ ಪಾಲನೆ ಮಾಡಬೇಕು. ಪ್ರಕೃತಿ ಉಳಿದರೆ ನಾವು ಉಳಿಯಲು ಸಾಧ್ಯ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಶಿವಪ್ಪ ನಾಯ್ಕರವರು ಮಾತನಾಡಿ, ಮರಾಟಿ ಸಂಘದಿಂದ ಇದೇ ಮೊದಲ ಬಾರಿಗೆ ಗ್ರಾಮದಲ್ಲಿ ಈ ರೀತಿಯ ನಡೆದಿದೆ. ಒಂದು ತಲೆಮಾರಿಗೆ ಒಂದು ಗಿಡ ನೆಟ್ಟರೆ, ಅರಣ್ಯ ಉಳಿದು ಒಳ್ಳೆಯ ಮಳೆ ಬೆಳೆ ಆಗಲು ಸಾಧ್ಯ ಎಂದು ಹೇಳಿದರಲ್ಲದೆ, ಎಲ್ಲಾ ಮರಾಟಿ ಬಾಂಧವರ ಪರವಾಗಿ ಅಭಿನಂದನೆ ಸಲ್ಲಿಸಿದರು.

ವೇದಿಕೆಯಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕುಶಾಪ್ಪ ಮೂಲ್ಯ ಅಧ್ಯಕ್ಷತೆಯನ್ನು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಆಶೋಕ್ ನಾಯ್ಕ ಕೆದಿಲ, ಶಿವಪ್ಪ ನಾಯ್ಕ ಬೆಳ್ತಂಗಡಿ, ವೆಂಕಪ್ಪ ನಾಯ್ಕ, ಶಿವರಾಮ ನಾಯ್ಕ ಮತ್ತು ಜಯಂತಿ ಮಾಲಾಡಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಕೇಶಾವತಿ, ಉಪಾಧ್ಯಕ್ಷ ಇಸುಬು ಮತ್ತು ಎಸ್.ಡಿ.ಎಂ.ಸಿ ಸದಸ್ಯರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಗೆ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.
ರವಿರಾಜ್ ಗೌಡ ಸ್ವಾಗತಿಸಿ, ಶಾಲಾ ಶಿಕ್ಷಕ ನಾರಾಯಣ ಗೌಡ ನಿರೂಪಿಸಿ, ಶಿವರಾಮ ನಾಯ್ಕ ಧನ್ಯವಾದ ಅರ್ಪಿಸಿದರು.