Thursday, January 23, 2025
ಸುದ್ದಿ

ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು – ವಿದ್ಯಾರ್ಥಿ ಸಂಘದ ಉದ್ಘಾಟನೆ – ಕಹಳೆ ನ್ಯೂಸ್

ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ 2019ರ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಚುನಾವಣಾಧಿಕಾರಿ, ಕನ್ನಡ ಉಪನ್ಯಾಸಕರಾದ ಶ್ರೀ ಗಣರಾಜ ಕುಂಬ್ಳೆಯವರು” ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಸಾಮಾಜಿಕ ಹೊಣೆಗಾರಿಕೆಯ ಪಾಠವನ್ನು ಅರಿತುಕೊಳ್ಳಬೇಕು. ಸಂಸ್ಥೆಯ ಸರ್ವಾಂಗೀಣ ಉನ್ನತಿಯ ಕಡೆಗೆ ಗಮನಹರಿಸಬೇಕು” ಎಂದು ನುಡಿದರು.

ನಂತರ ಮಾತನಾಡಿದ ಪ್ರಾಂಶುಪಾಲರಾದ ಎಂ.ಸತೀಶ್ ಭಟ್ ತಮ್ಮ ಉದ್ಘಾಟನಾ ಭಾಷಣದಲ್ಲಿ ” ಶಿಸ್ತು, ಸಂಯಮದಿಂದ ವರ್ತಿಸುತ್ತಾ ವಿದ್ಯಾರ್ಥಿ ನಾಯಕರು ಇತರ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರೀಯವಾಗುವಂತೆ ಸಹಪಾಠಿಗಳಿಗೆ ಸ್ಪೂರ್ತಿ ನೀಡಬೇಕು” ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಶ್ರೀ ರಾಧಾಕೃಷ್ಣ ಎಂ ಕಾಲೇಜಿನ ನೀತಿ ನಿಯಮಗಳನ್ನು ತಪ್ಪದೆ ಪಾಲಿಸುವಂತೆ ಹಿತವಚನ ನುಡಿದರು. ಉಪನ್ಯಾಸಕ ಶ್ರೀ ಚೇತನ್ ಮೊಗ್ರಾಲ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯಲ್ಲಿ

ಅಧ್ಯಕ್ಷರಾಗಿ ದ್ವಿತೀಯ ಕಲಾ ವಿಭಾಗದ ಜ್ಯೋತಿಕಾ ಪಿ ರೈ,

ಉಪಾಧ್ಯಕ್ಷರಾಗಿ ಪ್ರಧಮ ಪಿಸಿಎಮ್‍ಬಿ ವಿಭಾಗದ ದಿಲೀಪ್ ಕುಮಾರ್ ಪಿ ಆರ್,

ಕಾರ್ಯದರ್ಶಿಯಾಗಿ ದ್ವಿತೀಯ ಕಲಾ ವಿಭಾಗದ ರಶ್ಮಿ,

ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದ್ವಿತೀಯ ಪಿಸಿಎಮ್‍ಬಿ ವಿಭಾಗದ ಜಯಶ್ರೀ ಕೆ ಆಯ್ಕೆಯಾಗಿದ್ದಾರೆ.