Friday, January 24, 2025
ಸುದ್ದಿ

ಕೊನೆಗೂ ಯಶ್ ರಾಧಿಕಾ ದಂಪತಿ ಪುತ್ರಿಗೆ ನಾಮಕರಣ – ಕಹಳೆ ನ್ಯೂಸ್

ನಟ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ದಂಪತಿ, ತಮ್ಮ ಮಗಳಿಗೆ ಯಾವ ಹೆಸರಿಡುತ್ತಾರೋ ಎಂಬ ಕುತೂಹಲ ಯಶ್ ಹಾಗು ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಇತ್ತು. ಸ್ವತಃ ಅಭಿಮಾನಿಗಳೇ ಸಾಕಷ್ಟು ಹೆಸರುಗಳನ್ನು ಸೂಚಿಸಿದ್ದರು. ಅದರಲ್ಲಿ ಯಾಶಿಕಾ ಎಂಬ ಹೆಸರು ಪ್ರಮುಖವಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಇದೀಗ ಯಶ್ ದಂಪತಿ ಮಗಳಿಗೆ ನಾಮಕರಣ ಮಾಡಿದ್ದು, ತಮ್ಮ ಮುದ್ದಾದ ಹೆಣ್ಣು ಮಗುವಿಗೆ ‘ಐರಾ’ ಎಂದು ಹೆಸರಿಟ್ಟಿದ್ದಾರೆ. ಐರಾ ಎಂದರೆ ಗೌರವಾನ್ವಿತ ಅಥವಾ ಕಣ್ಣು ತೆರೆಸುವ ಎಂಬ ಅರ್ಥವಿದೆಯೆಂದು ಹೇಳಲಾಗುತ್ತಿದೆ.
ಯಶ್ ಹೆಸರಿನಲ್ಲಿರುವ ಇಂಗ್ಲೀಷ್ ವರ್ಣಮಾಲೆಯ ‘ಎ’ ಮತ್ತು ‘ವೈ’ ಮತ್ತು ರಾಧಿಕಾ ಪಂಡಿತ್‍ರ ‘ಆರ್’ ಮತ್ತು ‘ಎ’ಗಳನ್ನು ಬಳಸಿ ‘ಐರಾ’ ಎಂದು ವಿಭಿನ್ನವಾಗಿ ಹೆಸರಿಡುವ ಮೂಲಕ ಯಶ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ ಯಶ್ ರಾಧಿಕಾ ದಂಪತಿ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರ ತಾಜ್ ವೆಸ್ಟೆಂಡ್‍ನಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಯಶ್, ರಾಧಿಕಾ ದಂಪತಿ, ಅವರ ಪೋಷಕರು ಮತ್ತು ಕುಟುಂಬದ ಆಪ್ತರು, ಸ್ನೇಹಿತರು ಭಾಗವಹಿಸಿದ್ದರು. ಇನ್ನು ನಾಮಕರಣದ ವಿಡೀಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.