Friday, January 24, 2025
ಸುದ್ದಿ

ಶಾಸಕರಾದ ದಿಢೀರ್ ಭೇಟಿಯಿಂದ ಗಲಿಬಿಲಿಗೊಂಡ ಅಧಿಕಾರಿಗಳು – ಕಹಳೆ ನ್ಯೂಸ್

ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಕಾರವಾರದ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಕಚೇರಿಯಲ್ಲಿ ಯಾರೂ ಸಿಬ್ಬಂದಿಗಳಿಲ್ಲದ ಕಾರಣ ಸಿಟ್ಟಾದರು. ಶ್ರೀಮತಿ ನೀಲಮ ಗಜಿನಕರ ಎಂಬುವವರು ಪಿಂಚಣಿಗಾಗಿ ಏಳು ವರ್ಷಗಳಿಂದ ಅಲೆದಾಡುತ್ತಿದ್ದರೂ ಇದುವರೆಗೂ ಸಮಸ್ಯೆ ಪರಿಹಾರವಾಗದ ಕಾರಣ ಕೂಡಲೆ ಪರಿಹರಿಸಬೇಕೆಂದು ತಿಳಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರವಾರ ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಮನೆ ನಿರ್ಮಿಸಲು ಕೆ.ಡಿ.ಎಯಿಂದ ಅನುಮತಿಯ ಸರಳೀಕರಣ ಹಾಗೂ ಸ್ಥಳ ವಿನ್ಯಾಸ ನಕ್ಷೆ ಕುರಿತು ಚರ್ಚಿಸಲು ಮಾನ್ಯ ಶಾಸಕರು ಕೆ.ಡಿ.ಎ. ಆಯುಕ್ತರನ್ನು ಭೇಟಿಯಾಗಲು ತೆರಳಿದ್ದರು. ಆದರೆ ಅಲ್ಲಿ ಆಯುಕ್ತರು ಇಲ್ಲದೆ ಇರುವುದರಿಂದ ಸಿಟ್ಟಾದರು. ಅಧಿಕಾರಿಗಳು ಎಲ್ಲಿ ಎಂದು ವಿಚಾರಿಸಿದಾಗ ಗಲಿಬಿಲಿಗೊಂಡ ಸಿಬ್ಬಂಧಿಗಳು ಅಸಮಂಜಸ ಉತ್ತರ ನೀಡುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು