ಪುತ್ತೂರಿನಲ್ಲಿ ಸಾವಿರಾರು ಹಿಂದೂಗಳಿಂದ ಪ್ರತಿಭಟನೆ | ಪಿ.ಎಸ್.ಐ. ಕಾದರ್ ಅಮಾನತ್ತು ಮಾಡಿ ಇಲ್ಲಾ, ಸಿ.ಎಂ. ಆಗಮನದ ವೇಳೆ ದಕ್ಷಿಣ ಕನ್ನಡ ಬಂದ್ – ಜಗದೀಶ್ ಶೇನವ ಎಚ್ಚರಿಕೆ
ಪುತ್ತೂರು : ಹಿಂದೂ ಹಿತರಕ್ಷಣಾ ಸಮಿತಿವತಿಯಿಂದ ನಡೆದ ಬೃಹತ್ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಜಿಲ್ಲಾಧ್ಯಕ್ಷ ಜಗದೀಶ್ ಸೇನವ ಸಂಪ್ಯಾ ಠಾಣಾ ಪಿ.ಎಸ್.ಐ. ಅಬ್ದಲ್ ಕಾದರ್ ವಿರುದ್ಧ ಕಿಡಿಕಾರಿದ್ದಾರೆ.
ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು ಕಾದರ್ ಖಾಕಿಗೆ ಪಮಾನ, ಅಂತಹ ನಲಾಯಕ್ಕು ಚಿಲ್ಲರೆ ಬ್ಯಾರಿಗೆ ಬೇಕಾಗಿ ಇಷ್ಟು ಬೃಹತ್ ಮಟ್ಟದಲ್ಲಿ ಜನ ಸೇರಿರುವುದು ಬೇಸರ ತಂದಿದೆ. ಜನವರಿ ಐದರ ಒಳಗಾಗಿ ಕಾದರ್ ಸಹಿತ ಮೂರು ಜನ ಸಿಬ್ಬಂದಿಗಳನ್ನು ಅಮಾನತ್ತು ಮಾಡಬೇಕು ಇಲ್ಲವೇ ಏಳನೇ ತಾರೀಖು ಜಿಲ್ಲೆಗೆ ಸಿ.ಎಂ. ಆಗಮಿಸಲಿದ್ದು ಆ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಮಾಡುತ್ತೇವೆ ಎಂದು ಎಚ್ಚರಿಗೆ ನೀಡಿದರು.
ಕಾದರ್ ನ ಬೂಟಿಗೆ, ಲಾಠಿಗೆ ಅಂಜುವವರು ನಾವಲ್ಲ, ನಾವು ಟಿಪ್ಪು ವಂಶದವರಂತೆ ಹೇಡಿಗಳಲ್ಲ – ಸತ್ಯಜಿತ್ ಸುರತ್ಕಲ್
ಮಾಜಿ ಹಿಂದೂ ಜಾಗರಣಾ ವೇದಿಕೆ ಮುಖಂಡರಾದ ಸತ್ಯಜಿತ್ ಸುರತ್ಕಲ್ ಮಾತನಾಡಿ ನಮ್ಮದು ಗುರುಗೋವಿಂದ ಸಿಂಹನ ವಂಶ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮಕ್ಕಳನ್ನು ಬಲಿಕೊಟ್ಟ ಟಿಪ್ಪು ಸುಲ್ತಾನನಂತಹವರ ಹೇಡಿ ವಂಶ ನಮ್ಮದಲ್ಲ, ನಾವು ಯಾವತ್ತೂ ಕೇಸ್ ಕೋರ್ಟುಗಳಿಗೆ ಹೆದರುವವರೂ ಅಲ್ಲ, ಕಾದರ್ ನ ಬೂಟು ಲಾಠಿಗೂ ಹೆದರುವವರಲ್ಲ ಎಂದು ಹೇಳಿದರು. ವೇದಿಕೆಯಲ್ಲಿ ಬಜರಂಗದಳ ಮುಖಂಡರಾದ ಶರಣ್ ಪಂಪ್ವೆಲ್, ಜಾಗರಣಾ ವೇದಿಕೆ ಮುಖಂಡರಾದ ರಾಧಾಕೃಷ್ಣ ಅಡ್ಯಂತ್ತಾಯ, ಚನಿಲ ತಿಮ್ಮಪ್ಪ ಶೆಟ್ಟಿ ಉಪಸ್ಥಿತರಿದ್ದರು.
ಸಾವಿರಾರು ಕಾರ್ಯಕರ್ತರಿಂದ ಅಷ್ಟದಿಕ್ಕುಗಳಿಂದ ಏಕಕಾಲಕ್ಕೆ ಪಾದಾಯಾತ್ರೆ
ಪುತ್ತೂರು ನಗರಕ್ಕೆ ಅಷ್ಟದಿಕ್ಕುಗಳಿಂದ ಏಕಕಾಲಕ್ಕೆ ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯ ಮೂಲಕ ಆಗಮಿಸಿದರು ಪಾದಾಯಾತ್ರೆಯಲ್ಲಿ ಬಿ.ಜೆ.ಪಿ ಮುಖಂಡರು ಸೇರಿದಂತೆ ಹಿಂದೂ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳಿಂದ ಭಾರಿ ಬೆಂಬಲ
ನೂರಾರು ಸಂಖ್ಯೆಯ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರು ಪ್ರತಿಭಟನೆಗೆ ಬೆಂಬಲ ಸೂಚಿನ ನಗರದಿಂದ ತರಬೇತಿ ಬಹಿಷ್ಕರಿಸಿ ಪ್ರತಿಭಟನಾ ಪಾದಾಯಾತ್ರೆಯಲ್ಲಿ ಭಾಗವಹಿಸಿ ಬೆಂಬಲ ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಂಘ ಚಾಲಕರಾದ ಶಿವಪ್ರಸಾದ್ ಇ, ಮುಖಂಡರಾದ ರಘು ಶಕಲೇಶಪುರ, ಮುರಳಿಕೃಷ್ಣಹಸಂತಡ್ಕ , ರವಿರಾಜ ಶೆಟ್ಟಿ , ಬುಜಂಗ ಕುಲಾಲ್, ಸಂಜೀವ ಮಠಂದೂರು, ಅಶೋಕ್ ಕುಮಾರ್ ರೈ, ಬ್ರಿಜೇಶ್ ಚೌಟ, ಅರುಣ್ ಕುಮಾರ್ ಪುತ್ತಿಲ, ಸಹಜ್ ರೈ, ಶಿವರಂಜನ್, ಸಲೋಚನಾ ಭಟ್ , ಶೈಲಜಾ ಭಟ್, ಶ್ರೀಕೃಷ್ಣ ಉಪಾಧ್ಯಾಯ, ಸುಭಾಶ್ ಪಡೀಲ್, ಪದ್ಮನಾಭ ಕೋಂಕೊಡಿ, ಪದ್ಮನಾಭ ಕೊಟ್ಟಾರಿ, ಅನೀಶ್ ಬಡೆಕ್ಕಿಲ, ವಿದ್ಯಾ ಗೌರಿ, ಹರಿಣಿ ಪುತ್ತೂರಾಯ, ಪುಲಸ್ಯ ರೈ, ಆಶಾ ತಿಮ್ಮಪ್ಪ ಶೆಟ್ಟಿ, ಹರೀಶ್ ದೋಲ್ಪಾಡಿ, ಅಜಿತ್ ರೈ ಹೊಸಮನೆ ಮತ್ತಿತರರು ಉಪಸ್ಥಿತರಿದ್ದರು.