Wednesday, January 22, 2025
ಸುದ್ದಿ

ಪುತ್ತೂರಿನಲ್ಲಿ ಯುವ ಮನಸ್ಸುಗಳ ಸಮ್ಮಿಲನ – ಕಹಳೆ ನ್ಯೂಸ್

ಮೊಬೈಲ್, ಸಾಮಾಜಿಕ ಜಾಲತಾಣಗಳಲ್ಲಿ ಸದಾ ಚಾಟಿಂಗ್ ಮಾಡುತ್ತಾ ಮಗ್ನರಾಗುವ ಇಂದಿನ ಆಧುನಿಕ ಯುಗದ ಯುವ ಸಮೂಹಕ್ಕೆ ತಮ್ಮ ಭವಿಷ್ಯದ ಬದುಕು ಯಾವ ತೆರನಾಗಿರಬೇಕು ಎಂಬ ಅರಿವು ಬಹುತೇಕ ಮಂದಿಗೆ ಇರದು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವಿಚಾರವಾಗಿ ಯುವ ಸಮೂಹದ ಮನಸ್ಸುಗಳನ್ನು ಒಂದೆಡೆ ಸೇರಿಸಿ ಅವರಿಗೆ ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಔದ್ಯೋಗಿಕವಾಗಿ ಮತ್ತು ಸಮಾಜಿಕವಾಗಿ ಸಮಾಜದಲ್ಲಿ ಸಂತೋಷವಾಗಿ ಹೇಗೆ ಬದುಕನ್ನು ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಯಾವುದೇ ಭಾಷಣಕ್ಕೆ ಆಸ್ಪದ ಕೊಡದೆ ಕೇವಲ ಸಾಂಸ್ಕೃತಿಕವಾಗಿ ಮನಸ್ಸಿಗೆ ಮುದ ನೀಡುವ ‘ಮಾತು, ಹರಟೆ, ಆಟ, ಹಾಸ್ಯ, ನೃತ್ಯ, ಮನೋರಂಜನಾ ಆಟದಲ್ಲಿ ಯುವ ಸಮೂಹವು ಇದು ನಮ್ಮ ಕಾರ್ಯಕ್ರಮ ಎಂಬಂತೆ ಉಲ್ಲಾಸಭರಿತರಾಗಿ ಪಾಲ್ಗೊಂಡು ಒಂದು ಅಪೂರ್ವ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವೆಲ್ಲ ಯುವವಾಹಿನಿ ಪುತ್ತೂರು ಘಟಕ ಹಾಗೂ ತಾಲೂಕು ಬಿಲ್ಲವ ವಿದ್ಯಾರ್ಥಿ ಸಂಘದ ನೇತೃತ್ವದಲ್ಲಿ ಪುತ್ತೂರು-ಬಪ್ಪಳಿಗೆ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ವ್ಯಾಪ್ತಿಯಲ್ಲಿ ಬರುವ ಯುವವಾಹಿನಿ ಘಟಕಗಳ ಸದಸ್ಯರಿಗೆ ಜೂನ್ 23ರಂದು ಹಮ್ಮಿಕೊಂಡಿದ್ದ ಯುವ ಮನಸ್ಸುಗಳ ಸಮ್ಮಿಲನ ‘ಬಾಂಧವ್ಯ’ ಕಾರ್ಯಕ್ರಮದಲ್ಲಿ ಕಂಡುಬಂದ ದೃಶ್ಯಗಳಾಗಿವೆ.