Wednesday, January 22, 2025
ಸುದ್ದಿ

ಆಹಾರವನ್ನು ಹುಡುಕಿಕೊಂಡು ನಾಡಿಗೆ ಬಂದು ಬಾವಿಗೆ ಬಿದ್ದ ಚಿರತೆ – ಕಹಳೆ ನ್ಯೂಸ್

ಆಹಾರವನ್ನು ಹುಡುಕಿಕೊಂಡು ನಾಡಿಗೆ ಬಂದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ನಾವೂರಿನಲ್ಲಿ ಇಂದು ಬೆಳಗ್ಗೆ ಪತ್ತೆಯಾಗಿದೆ. ನಾವೂರು ಗ್ರಾಮದ ಗಂಗಯ್ಯ ಗೌಡ ಎಂಬವರ ಮನೆಯ ಬಾವಿಗೆ ರಾತ್ರಿ ವೇಳೆ ಚಿರತೆಯೊಂದು ಬಿದ್ದಿದೆ. ಆಹಾರ ಹುಡುಕುತ್ತಾ ಬಂದ ವೇಳೆ ಆಕಸ್ಮಿಕವಾಗಿ ಚಿರತೆ ಬಾವಿಗೆ ಬಿದ್ದಿರಬಹುದು ಎಂದು ಅಂದಾಜಿಸಲಾಗಿದೆ. ಇಂದು ಬೆಳಿಗ್ಗೆ ಚಿರತೆಯು ಬಾವಿಯೊಳಗೆ ಬದಿಯಲ್ಲಿ ಕುಳಿತಿರುವುದನ್ನು ಕಂಡ ಮನೆಯವರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು