Tuesday, January 21, 2025
ಸುದ್ದಿ

ದ.ಕ. ಜಿಲ್ಲಾಧಿಕಾರಿಗಳಿಗೆ ಮಂಗಳೂರು ಟೂರಿಸ್ಟ್ ವಾಹನ ಚಾಲಕ-ಮಾಲಕರಿಂದ ಮನವಿ – ಕಹಳೆ ನ್ಯೂಸ್

2019ರ ಲೋಕಸಭಾ ಚುನಾವಣೆಗೆ ನೀಡಿದ ವಾಹನಗಳ ಬಾಡಿಗೆ ಹಣ ಶೀಘ್ರ ಪಾವತಿ ಮಾಡಲು ಒತ್ತಾಯ.
2019ರ ಲೋಕಸಭಾ ಚುನಾವಣೆ ಮುಗಿದು 2 ತಿಂಗಳುಗಳೇ ಕಳೆದಿದೆ; ಆದರೆ ಚುನಾವಣಾ ಜರೂರಿಗಾಗಿ RTO ಮನವಿ‌ ಮೇರೆಗೆ ಮಂಗಳೂರಿನಲ್ಲಿ ಹತ್ತಾರು ವಾಹನಗಳನ್ನು ಉಪಯೋಗಿಸಿಕೊಳ್ಳಲಾಗಿತ್ತು. ಆದರೆ ಇಷ್ಟು ದಿನಗಳು ಕಳೆದರೂ ವಾಹನದ ಬಾಡಿಗೆ ಹಣವನ್ನು ತಾಲೂಕ್ ಆಫೀಸ್ ನಿಂದ ವಾಹನ ಚಾಲಕ – ಮಾಲಕರಿಗೆ ನೀಡಲಾಗಿಲ್ಲ; ಕೆಲವರಿಗೆ ನೀಡಿದರೂ ಸಮರ್ಪಕವಾಗಿ ಪಾವತಿ ಮಾಡಲಾಗಿಲ್ಲ. ಹೆಚ್ಚಿನ ಎಲ್ಲಾ ಕಾರ್ ವಾಹನದ ಮಾಲಕರು ತಿಂಗಳ ಕಂತು ತುಂಬಿ ಉಳಿದ ಹಣದಲ್ಲಿ ಕಷ್ಟದಲ್ಲಿ ಸಂಸಾರ, ಜೀವನ ನಡೆಸುತ್ತಿದ್ದರು. ಆದರೆ ಚುನಾವಣಾ ಜರೂರಿಗಾಗಿ ಈಗ ಕೆಲಸ ಮಾಡಿಯೂ ಹಣ ಪಾವತಿಯಾಗದಿರುವುದು ಕಾರ್ ಚಾಲಕ – ಮಾಲಕರನ್ನು ಕೆರಳಿಸಿದ್ದು ಇನ್ನು 1 ವಾರದೊಳಗೆ ಪಾವತಿ ಮಾಡದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡುವ ಉದ್ದೇಶದಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಕಾರ್ ಚಾಲಕ ಮಾಲಕರು ಮನವಿ ನೀಡಿದರು.

ಜಾಹೀರಾತು

ಜಾಹೀರಾತು
ಜಾಹೀರಾತು