Saturday, November 23, 2024
ಸುದ್ದಿ

ಗೋ ಕಳ್ಳತನಕ್ಕೆ ಕಡಿವಾಣ ಹಾಕಿ – ಶಾಸಕ ಹರೀಶ್ ಪೂಂಜಾರಿಂದ ಡಿಜಿಪಿ ನೀಲಮಣಿಗೆ ಆಗ್ರಹ – ಕಹಳೆ ನ್ಯೂಸ್

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವ್ಯಾವಹತವಾಗಿ ನಡೆಯುತ್ತಿರುವ ಗೋಕಳ್ಳತನ, ಅಕ್ರಮ ಗೋಸಾಗಾಟ ಹೆಚ್ಚುತ್ತಿದೆ. ಮೇಯಲು ಬಿಟ್ಟ ಗೋವುಗಳನ್ನು ಕಳ್ಳತನ ಮಾಡುತ್ತಿದ್ದ ಗೋಕಳ್ಳರು ಈಗ ಬಡರೈತರ ಕೊಟ್ಟಿಗೆಗೆ ನುಗ್ಗಿ, ತಲವಾರು ಬೀಸಿ ಗೋವುಗಳನ್ನು ಅಪಹರಿಸುತ್ತಿದ್ದಾರೆ. ಈ ಬಗ್ಗೆ ಆದಷ್ಟು ಬೇಗ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಶ್ರೀಮತಿ ನೀಲಮಣಿ ಎನ್ ರಾಜು ಅವರನ್ನು ಭೇಟಿಯಾಗಿ ಗೋಕಳ್ಳತನ, ಅಕ್ರಮ ಗೋಸಾಗಾಟದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಆಗ್ರಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದನ್ನು ತಡೆಯಲು ಜಿಲ್ಲಾಡಳಿತ ವಿಫಲವಾಗುತ್ತಿದೆ. ಚಾರ್ಮಾಡಿಯಲ್ಲಿ ಅಪಘಾತಕ್ಕೀಡಾದ ವಾಹನವೊಂದರಲ್ಲಿ ಕರುಣಾಜನಕ ಸ್ಥಿತಿಯಲ್ಲಿ ಪತ್ತೆಯಾದ ಗೋವುಗಳ ಪ್ರಸ್ತುತ ಪರಿಸ್ಥಿತಿಗೆ ಕೈಗನ್ನಡಿಯಾಗಿದೆ. ಸಾರ್ವಜನಿಕರು ಗೋಕಳ್ಳತನ ತಡೆಯುವ ಪ್ರಯತ್ನ ಮಾಡಿದಾಗ ಅವರ ಮೇಲೆ ಕೇಸ್ ದಾಖಲು ಮಾಡಲಾಗಿದೆ. ಅದನ್ನು ಹೊರತಾಗಿ ಅಕ್ರಮ ಗೋಸಾಗಾಟ ನಿಲ್ಲಿಸುವ ಯಾವ ಪ್ರಯತ್ನವೂ ನಡೆದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾಲ್ಕು ದಿನದ ಹಿಂದೆ ಗೋಕಳ್ಳರನ್ನು ಹಿಡಿದ ಪೊಲೀಸರ ಮುಂದೆ ಪಟಾಕಿ ಸಿಡಿಸಿ ಗೋವುಗಳನ್ನು ಸಾಗಿಸಿ ಪೊಲೀಸರಿಗೆ ಸವಾಲೆಸೆದ ಘಟನೆ ಕೂಡ ನಡೆದಿದೆ.

ಇದೆ ರೀತಿ ನಡೆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸೌಹಾರ್ದ ಕದಡುವ ಸಾಧ್ಯತೆ ಇದೆ ಎಂದು ಡಿಜಿಪಿ ಅವರಿಗೆ ಜಿಲ್ಲೆಯ ಸ್ಥಿತಿ ಬಗ್ಗೆ ಮನವರಿಕೆ ಮಾಡಿದ್ದಾರೆ.