Tuesday, January 21, 2025
ಸುದ್ದಿ

ಸಾರ್ವಜನಿಕ ಸ್ಥಳದಲ್ಲಿ ಧಮ್ ಎಳೆದ ನಟನಿಗೆ ದಂಡ – ಕಹಳೆ ನ್ಯೂಸ್

ನೂತನ ಸಿನಿಮಾದ ಚಿತ್ರೀಕರಣದ ವಿರಾಮದ ವೇಳೆ ಐತಿಹಾಸಿಕ ಚಾರಮಿನಾರ್ ಸಮೀಪ ಸಿಗರೇಟ್ ಸೇವನೆ ಮಾಡಿದ ಟಾಲಿವುಡ್ ಸ್ಟಾರ್ ನಟ ರಾಮ್ ಪೋತಿನೇನಿಗೆ ಪೊಲೀಸರು 200 ರೂಪಾಯಿ ದಂಡ ವಿಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯುವ ನಟನ ಬಹುನಿರೀಕ್ಷಿತ ‘ಇಸ್ಮಾರ್ಟ್ ಶಂಕರ್’ ಸಿನಿಮಾದ ಚಿತ್ರೀಕರಣದ ಬಿಡುವಿನ ವೇಳೆ ರಾಮ್ ಧೂಮಪಾನ ಮಾಡಿದ್ದು, ಇದಕ್ಕಾಗಿ ದಂಡ ವಿಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ 2003ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಸೇವನೆ ನಿಷೇಧಿಸಿದ್ದು, ರಾಮ್ ಪೋತಿನೇನಿಗೆ 200 ರೂ. ದಂಡ ವಿಧಿಸಿ ಚಲನ್ ನೀಡಲಾಗಿದೆ ಎಂದು ವಿವರಿಸಿದ್ದಾರೆ.

ಸ್ಥಳದಲ್ಲಿಯೇ 200 ರೂಪಾಯಿ ದಂಡ ವಿಧಿಸಿ ರಾಮ್‍ಗೆ ಚಲನ್ ನೀಡಿದ್ದು, ಬಳಿಕ ಪ್ರೊಡಕ್ಷನ್ ಮ್ಯಾನೇಜರ್ ದಂಡವನ್ನು ಪಾವತಿಸಿರುವುದಾಗಿ ವರದಿ ತಿಳಿಸಿದೆ.