Tuesday, January 21, 2025
ಸಿನಿಮಾ

ಈ ಸೆಲೆಬ್ರಿಟಿ ನಿರೂಪಕನಿಗೆ, ಒಂದು ಸೀಸನ್‍ನ ನಿರೂಪಣೆಗೆ 403 ಕೋಟಿ ರೂಪಾಯಿ! – ಕಹಳೆ ನ್ಯೂಸ್

ಹಿಂದಿಯ ವಿವಾದಿತ ರಿಯಾಲಿಟಿ ಶೋ ಬಿಗ್‍ಬಾಸ್ ಸೀಸನ್ 13 ಮತ್ತೊಮ್ಮೆ ಪ್ರಾರಂಭವಾಗಲಿದ್ದು, ಪಿಂಕ್ ವಿಲ್ಲಾ ವರದಿ ಪ್ರಕಾರ, ಸೀಸನ್ 13ರ ಶೋ ನಡೆಸಿಕೊಡಲಿರುವ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾಲ್ ಪಡೆಯುವ ಸಂಭಾವನೆ ಬರೋಬ್ಬರಿ 403 ಕೋಟಿ ರೂಪಾಯಿ ಎನ್ನಲಾಗಿದೆ!

ಬಿಗ್‍ಬಾಸ್ 13ನೇ ಸೀಸನ್‍ನ 26 ಎಸಿಸೋಡ್‍ಗಳಿಗೆ ಸಲ್ಮಾನ್ ಖಾನ್ 403 ಕೋಟಿ ರೂಪಾಯಿ ಬೃಹತ್ ಮೊತ್ತದ ಸಂಭಾವನೆ ಪಡೆಯಲಿದ್ದು, ಒಂದು ವಾರದ ಎಪಿಸೋಡ್‍ಗೆ ಖಾನ್ 31 ಕೋಟಿ ರೂಪಾಯಿ ಪಡೆದಂತಾಗಿದೆ ಎಂದು ವರದಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಮಾಧ್ಯಮಗಳ ವರದಿ ಪ್ರಕಾರ, ಕಳೆದ ವರ್ಷದ ಬಿಗ್ ಬಾಸ್‍ನ ಪ್ರತಿ ಎಪಿಸೋಡ್‍ಗೆ ಸಲ್ಮಾನ್ ಖಾನ್ 12ರಿಂದ 14 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವರ್ಷ ಹಿಂದಿ ಅವತರಣಿಕೆಯ ಬಿಗ್‍ಬಾಸ್ 13 ಸೆಪ್ಟೆಂಬರ್ 29ರಿಂದ ಪ್ರಸಾರವಾಗಲಿದ್ದು, ಬಹುತೇಕ ಬಿಗ್‍ಬಾಸ್ ಮನೆಯೊಳಗೆ ಯಾರೆಲ್ಲ ಎಂಟ್ರಿ ಪಡೆಯಲಿದ್ದಾರೆ ಎಂಬುದು ಇನ್ನೂ ಬಹಿರಂಗವಾಗಿಲ್ಲ.