ಟೆಕ್ ದೈತ್ಯ ಕಂಪನಿ ಗೂಗಲ್.. ಇದರ ಪ್ಲೇ ಸ್ಟೋರ್ ಗೆ ಹೋದ್ರೆ ಅದೆಂತ ಆಪ್‍ಗಳು ಸಿಗ್ತಾವೆ ಅನ್ನೋದನ್ನ ಊಹಿಸಲೂ ಅಸಾಧ್ಯ. ಪ್ರತಿಯೊಂದು ವಿಷಯಕ್ಕೆ ಸಂಬಂಧಿಸಿದಂತೆ ಅಸಂಖ್ಯಾತ ಅಪ್ಲಿಕೇಶನ್‍ಗಳು ಸಿಗುತ್ತವೆ. ಆದರೆ ಪ್ಲೇ ಸ್ಟೋರ್ ನಲ್ಲಿ ಲಭ್ಯವಾಗುವ ಎಲ್ಲಾ ಆಪ್‍ಗಳು ಸುರಕ್ಷಿತವಲ್ಲ. ಅವುಗಳಲ್ಲಿ ಡೇಂಜರ್ಸ್ ಆಪ್‍ಗಳು ಸೇರಿಕೊಂಡಿರುತ್ತವೆ. ಆದ್ರೆ ಇದೀಗ ಗೂಗಲ್ ತನ್ನ ಪ್ಲೇ ಸ್ಟೋರ್ ನಲ್ಲಿ ಸುಮಾರು 2000 ಅಸುರಕ್ಷಿತ ಮಾಲ್ವೇರ್ ಅಪ್ಲಿಕೇಶನ್‍ಗಳನ್ನು ಪತ್ತೆ ಹಚ್ಚಿದೆ.
ಹೌದು, ಗೂಗಲ್ ಪ್ಲೇ ಸ್ಟೋರ್ ನಲ್ಲಿ ಸುಮಾರು 2000 ಅಸುರಕ್ಷಿತ ಆಪ್ಸ್ ಗಳನ್ನು ಇತ್ತೀಚಿಗೆ ಸಿಡ್ನಿ ಯುನಿವರ್ಸಿಟಿಯ ಸಂಶೋಧಕರ ಮತ್ತು CSIRO’s Data 61 ತಂಡವು ಪತ್ತೆ ಮಾಡಿದೆ. ಈ ಸಂಶೋಧಕರ ತಂಡವು ಗೂಗಲ್ ಪ್ಲೇ ಸ್ಟೋರ್ ನಿಂದ ಸುಮಾರು 1 ಮಿಲಿಯನ್ ಆಪ್ಸ್ ಗಳನ್ನು ಸಂಶೋಧನೆಗೆ ಬಳಸಿಕೊಂಡಿದ್ದು, ಅವುಗಳಲ್ಲಿ ಸುಮಾರು 2000ಕ್ಕೂ ಅಧಿಕ ಅಪಾಯಕಾರಿ ಅಪ್ಲಿಕೇಶನ್‍ಗಳು ಪತ್ತೆಯಾಗಿವೆ. ಅಸುರಕ್ಷಿತ ಆಪ್ಸ್ ಗಳಲ್ಲಿ ಕೆಲವು ಜನಪ್ರಿಯ ಗೇಮ್ಸ್ ಆಪ್‍ಗಳು ಸೇರಿವೆ. ಹಾಗೆಯೇ ಇನ್ನು ಕೇಲವು ಆಪ್ಸ್ ಗಳು ಅನಗತ್ಯವಾಗಿ ಗ್ಯಾಲರಿ, ಕಾಂಟ್ಯಾಕ್ಟ್ಸ್, ಕ್ಯಾಮೆರಾ ಆಯ್ಕೆಯ ಅಕ್ಸಸ್ ಕೇಳುತ್ತವೆ.
ಗೂಗಲ್ 2018ರಲ್ಲಿ ಮಾಲ್ವೇರ್ ಆಪ್‍ಗಳು ಪ್ಲೇ ಸ್ಟೋರ್ ಸೇರದಂತೆ ಕ್ರಮ ಕೈಗೊಂಡಿತ್ತು. ಆದರೂ ಕಳೆದ ವರ್ಷಕ್ಕೆ ಹೋಲಿಸಿದರೇ ಪ್ಲೇಸ್ಟೋರ್ ನಲ್ಲಿ ಅಪಾಯಕಾರಿ ಆಪ್ಸ್ ಗಳ ಸಂಖ್ಯೆಯಲ್ಲಿ ಶೇ.55% ರಷ್ಟು ಹೆಚ್ಚಳವಾಗಿದೆ ಎನ್ನಲಾಗಿದೆ. ಪ್ಲೇ ಸ್ಟೋರ್ ನಲ್ಲಿ ಕೇಲವು ಆಪ್ಸ್ ಗಳು ಇತರೆ ಆಪ್ಸ್ ಗಳ ಐಕಾನ್ ಕಾಪಿ ಮಾಡಿದ್ದು, ಮತ್ತು ಡಿಸ್ಕ್ರಿಪ್ಶನ್ ಸಹ ಕಾಪಿ ಮಾಡಿರುವುದು ಸಂಶೋಧನೆಯ ವೇಳೆ ಬೆಳಕಿಗೆ ಬಂದಿವೆ.
ಸಂಶೋಧಕರು ಪ್ರೈವೇಟ್ API ಆನ್‍ಲೈನ್ ಮಾಲ್ವೇರ್ ಅನಾಲಿಸಿಸ್ ಟೂಲ್ ವೈರಸ್ ಟೂಟಲ್ ಮೂಲಕ ಮಾಲ್ವೇರ್ ಆಪ್‍ಗಳನ್ನು ಪರಿಶೀಲಿಸಿದ್ದು, ಸುಮಾರು 2040 ಅತೀ ಅಪಾಯಕಾರಿ ಆಪ್ಸ್ ಗಳನ್ನು ಗುರುತಿಸಿದ್ದಾರೆ. ಗೂಗಲ್ ಫ್ಲೆಕ್ಸಿಬಲ್ ಮತ್ತು ಕಸ್ಟಮೈಸ್ ಮಾದರಿಯಲ್ಲಿರುವುದರಿಂದ ಯಾರಾದರೂ ಅಪ್ಲಿಕೇಶನ್ ಸಿದ್ಧಪಡಿಸಬಹುದಾಗಿದೆ. ಹೀಗಾಗಿ ಸರಳವಾಗಿ ಪ್ಲೇ ಸ್ಟೋರ್ ನಲ್ಲಿ ದುರುದ್ದೇಶದ ಆಪ್ಸ್ ಗಳು ಸೇರಿಕೊಳ್ಳುತ್ತವೆ. ಆದರೆ ಪ್ಲೇ ಸ್ಟೋರ್ ನಲ್ಲಿನ ಮಾಲ್ವೇರ್ ಆಪ್ಸ್ ಗಳಿಂದ ಸ್ಮಾರ್ಟ್‍ಫೋನ್ ಬಳಕೆದಾರರಿಗೆ ತೊಂದರೆ ಆಗದಂತೆ ಬೇಗನೇ ಪರಿಹಾರ ಕಂಡುಕೊಳ್ಳಬೇಕಿದೆ ಎನ್ನುವುದು ಸಂಶೋಧಕರ ಅಭಿಪ್ರಾಯವಾಗಿದೆ. ಅಂಥಹ ಆಪ್ಸ್ ಗಳನ್ನು ಈಗಾಗಲೇ ಗೂಗಲ್ ತೆಗೆದು ಹಾಕಿದೆ.