ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಸಹಕಾರಿ ಮಾರಾಟ ಸಂಘ ನಿಯಮಿತ ಜೋಡುಮಾರ್ಗ ಇದರ ವಾರ್ಷಿಕ ಮಹಾಸಭೆ ಬಿಸಿರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘ ಈ ವರ್ಷ 16,18.625 ಲಕ್ಷ ಲಾಭಾಂಶ ಹೊಂದಿದ್ದು, 7.97 ಲಕ್ಷ ಪಾಲು ಬಂಡವಾಳ ಹೊಂದಿದೆ, 10 ಕೋಟಿ ನಿರಖು ಠೇವಣಿ ಹೊಂದಿದೆ. ಡಿ.ಸಿ.ಸಿ.ಬ್ಯಾಂಕ್ ನಲ್ಲಿ 663 ಲಕ್ಷ ಠೇವಣಿ ಹೂಡಿದ್ದು, 389 ಲಕ್ಷ ಹೊರಸಾಲ ಕೊಟ್ಟಿರುತ್ತದೆ, ಲೆಕ್ಕ ಪರಿಶೋಧನ ವರದಿಯಲ್ಲಿ “ಎ” ವರ್ಗವನ್ನು ಹೊಂದಿದೆ.
ಈ ಸಂಘದ ಮೂಲಕ ಪ್ರತಿ ವರ್ಷ ಸಾಮಾಜಿಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡುತ್ತಿದೆ, ಪ್ರತಿ ವರ್ಷ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿ ವೇತನ ಆರೋಗ್ಯ ಶಿಬಿರ ಹೀಗೆ ಅನೇಕ ಸಾರ್ವಜನಿಕರಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದೇವೆ ಎಂದು ಅವರು ಹೇಳಿದರು. ಸಂಘವು ಸ್ವಂತ 3.47 ಎಕ್ರೆ ಜಮೀನು ಹೊಂದಿದ್ದು, 7 ಗೋದಾಮುಗಳು ಈ ಜಾಗದಲ್ಲಿ ಹೊಂದಿದೆ. 3 ಬ್ರಾಂಚ್‍ಗಳನ್ನು ಹೊಂದಿದ್ದು ರೈತರ ಅನುಕೂಲದ ದೃಷ್ಟಿಯಿಂದ ಸಾಮಾಗ್ರಿಗಳನ್ನು ಮಾರಾಟ ಮಾಡುವ ವ್ಯವಸ್ಥೆ ಮಾಡಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷೆ ಹರ್ಷಿಣಿ, ನಿರ್ದೇಶಕರುಗಳಾದ ಬಿ.ಟಿ.ನಾರಾಯಣ ಭಟ್, ಸೀತಾರಾಮ ಶೆಟ್ಟಿ, ಜ್ಞಾನೇಶ್ವರ ಪ್ರಭು, ಪಿ.ಸುಬ್ರಹ್ಮಣ್ಯ ರಾವ್, ರತ್ನ, ಶಶಿಕಲಾ ಉಡುಪ, ರಾಮನಾಯ್ಕ, ಪದ್ಮನಾಭ ಕಿದಬೆಟ್ಟು, ಸುಂದರ ಭಂಡಾರಿ, ಪಿ.ವೆಂಕಟೇಶ ನಾವುಡ, ಪ್ರಭಾಕರ ಶೆಟ್ಟಿ ಅವರು ಉಪಸ್ಥಿತರಿದ್ದರು.
ಸಂಘದ ಅಧ್ಯಕ್ಷ ರವೀಂದ್ರ ಕಂಬಳಿ ಸ್ವಾಗತಿಸಿ, ನಿರ್ದೇಶಕ ಬಿ.ಟಿ.ನಾರಾಯಣ ಭಟ್ ವಂದಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯು. ಧರ್ಮಪಾಲ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು