Saturday, November 23, 2024
ಕ್ರೀಡೆ

‘ಭಾರತ ವಿರುದ್ಧ ಸೋತ ಬಳಿಕ ನಾನು ಆತ್ಮಹತ್ಯೆಗೆ ನಿರ್ಧರಿಸಿದ್ದೆ’: ಪಾಕ್ ಕೋಚ್ – ಕಹಳೆ ನ್ಯೂಸ್

ಭಾರತ- ಪಾಕಿಸ್ತಾನ ನಡುವೆ ಕ್ರಿಕೆಟ್ ನಡೆದರೆ ಅದು ಹೈ ವೋಲ್ಟೇಜ್ ಪಂದ್ಯ ಎಂದೇ ಬಿಂಬಿತ. ಇಡೀ ಭಾರತೀಯರು ಆ ದಿನದ ಕೆಲಸ ಕಾರ್ಯಗಳನ್ನು ಪಕ್ಕಕ್ಕಿಟ್ಟು ಪಂದ್ಯ ವೀಕ್ಷಿಸುತ್ತಾರೆ. ಮೊನ್ನೆ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನ ಈ ಬಾರಿಯ ವಿಶ್ವಕಪ್‍ನಲ್ಲೂ ಪಾಕಿಸ್ತಾನ ತಂಡ ಭಾರತ ವಿರುದ್ಧ ಸೋಲುಂಡಿದ್ದು, ತನ್ನ ಕೆಟ್ಟ ದಾಖಲೆಯನ್ನು ಮುಂದುವರೆಸಿದೆ. ಭಾರತ ವಿರುದ್ಧ ಪಾಕಿಸ್ತಾನ ಹೀನಾಯವಾಗಿ ಸೋತ ಬಳಿಕ ಭಾರೀ ಟೀಕೆಗಳಿಗೆ ಒಳಗಾಗಿತ್ತು. ತಂಡದ ನಾಯಕ, ಕೋಚ್ ವಿರುದ್ಧ ಅಭಿಮಾನಿಗಳಂತೂ ಸಾಮಾಜಿಕ ತಾಣಗಳಲ್ಲಿ ಸಿಡಿದೆದ್ದಿದ್ದರು. ಅಲ್ಲದೆ ಪಾಕಿಸ್ತಾನ ಕ್ರಿಕೆಟ್ ತಂಡವನ್ನು ಬ್ಯಾನ್ ಮಾಡುವಂತೆ ಕೋರ್ಟ್‍ಗೆ ಹೋದ ಘಟನೆಯೂ ನಡೆದಿತ್ತು.

ಹೀಗಿರುವಾಗ ಪಾಕಿಸ್ತಾನ ತಂಡದ ಕೋಚ್ ಮಿಕ್ಕಿ ಆರ್ಥರ್ ಭಾರತ ವಿರುದ್ಧದ ಪಂದ್ಯ ಸೋತ ಬಳಿಕ ನಾನು ಆತ್ಮಹತ್ಯೆ ಮಾಡಲು ನಿರ್ಧಾರ ಮಾಡಿದ್ದೆ ಎಂಬ ಆಘಾತಕಾರಿ ಸುದ್ದಿ ಬಿಚ್ಚಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾಕಿಸ್ತಾನ ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ 49 ರನ್‍ಗಳ ಜಯ ಸಾಧಿಸಿ ತನ್ನ ವಿಶ್ವಕಪ್ ಹಾದಿಯನ್ನು ಜೀವಂತವಾಗಿರಿಸಿದೆ. ಈ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಕೋಚ್ ಮಿಕ್ಕಿ ಈ ವಿಚಾರವನ್ನು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು