ಕಾರವಾರದ ಕಾಜುಬಾಗ ಆಕಾಶವಾಣಿ ಕೇಂದ್ರದ ಮುಂಭಾಗದಲ್ಲಿರುವ ಶಿಟ್ಟಾ ಏರಿಯಾದಲ್ಲಿ ಬಹಳ ವರ್ಷಗಳಿಂದಲೂ ಮಳೆಗಾಲ ಆರಂಭವಾಗುತ್ತಿದ್ದಂತೆ ಸುತ್ತಮುತ್ತಲ ಪ್ರದೇಶಗಳು ಜಲಾವೃತವಾಗುತ್ತವೆ. ಈ ಹಿನ್ನೆಲೆಯಲ್ಲಿ ಮಾನ್ಯ ಶಾಸಕಿ ಶ್ರೀಮತಿ ರೂಪಾಲಿ ಎಸ್ ನಾಯ್ಕರವರು ಇಂದು ಅಲ್ಲಿಗೆ ಭೇಟಿ ನೀಡಿ, ಅಲ್ಲಿನ ಜನರ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರ ಪಡೆದುಕೊಂಡರು.
ನಗರಸಭೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬರುವ ರವಿವಾರರಂದು ಆ ಭಾಗದ ಜನರ ಸಭೆಯನ್ನು ಕರೆದು ಸಮಸ್ಯೆಯನ್ನು ಆಲಿಸಿ ಮತ್ತು ಸಲಹೆಗಳನ್ನು ಪಡೆದು ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಮಾಡಿಕೊಡುವ ಭರವಸೆಯನ್ನು ಮಾನ್ಯ ಶಾಸಕರು ನೀಡಿದರು. ಆ ಭಾಗದ ಜನರು ತಮ್ಮ ಸ್ವಲ್ಪ ಜಾಗವನ್ನು ಚರಂಡಿ ವ್ಯವಸ್ಥೆಗೆ ಬಿಟ್ಟು ಕೊಟ್ಟಲ್ಲಿ ನೀರನ್ನು ಸಾರಾಗವಾಗಿ ಹರಿದು ಹೋಗುವ ವ್ಯವಸ್ಥೆಯನ್ನು ಹಾಗೂ ರಸ್ತೆಯನ್ನು ಕೂಡಾ ಮಾಡಿಕೊಡಬಹುದೆಂದು ಶಾಸಕಿ ಸಲಹೆ ನೀಡಿದರು.