ಲಯನ್ಸ್ ಪುತ್ತೂರು ಘಟಕಕ್ಕೆ ಸುವರ್ಣ ಸಂಭ್ರಮ. ನೂತನ ಅಧ್ಯಕ್ಷರಾಗಿ ಲಯನ್ ಶಿವಪ್ರಸಾದ್ ಶೆಟ್ಟಿ ಅಧಿಕಾರ ಸ್ವೀಕರಿಸಿದರೆ, ನೂತನ ಕಾರ್ಯದರ್ಶಿಯಾಗಿ ಲಯನ್ ಹರಿಪ್ರಸಾದ್ ಪಿ.ಕೆ ಅವರು ಪದಗ್ರಹಣ ಸ್ವೀಕರಿಸಿದರು.
ಲಯನ್ಸ್ ಕ್ಲಬ್ ಪುತ್ತೂರು, ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಲಯನ್ಸ್ ಸೇವಾ ಮಂದಿರ ಪುತ್ತೂರಿನಲ್ಲಿ ಜೂನ್ 25ರಂದು ನಡೆಯಿತು. ಲಯನ್ ಡಿ.ವೆಂಕಟ್ರಮಣ ಘಾಟೆಯವರು ತಮ್ಮ ಅಧ್ಯಕ್ಷೀಯ ಸ್ಥಾನವನ್ನು ಲಯನ್ ಶಿವಪ್ರಸಾದ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಲಯನ್ ಆನಂದ ಆಚಾರ್ಯ ತಮ್ಮ ಕಾರ್ಯದರ್ಶಿ ಸ್ಥಾನವನ್ನು ಲಯನ್ ಹರಿಪ್ರಸಾದ್ ಪಿಕೆಯವರಿಗೆ ಹಸ್ತಾಂತರಿಸಿದರು. ನೂತನ ಪದಗ್ರಹಣವನ್ನು ಲಯನ್ಸ್ ಕ್ಲಬ್ ಮಂಗಳೂರಿನ ಅಧ್ಯಕ್ಷರಾದ ಲಯನ್ ವಿಜಯ ವಿಷ್ಣುಮಯ್ಯ ನಿರ್ವಹಿಸಿದರು.
ಪುತ್ತೂರು ಲಯನ್ಸ್ ಕ್ಲಬ್, ಈ ಬಾರಿ ಸುವರ್ಣ ಮಹೋತ್ಸವ ಆಚರಿಸುತ್ತಿರು ಹಿನ್ನೆಲೆಯಲ್ಲಿ ರಸ್ತೆ ಸುರಕ್ಷತಾ ಸ್ಟಿಕರನ್ನು ಬಿಡುಗಡೆಗೊಳಿಸಲಾಯಿತು. ಹಾಗೂ ಕ್ಲಬ್ನ ವತಿಯಿಂದ ಅನೇಕ ಸಾಮಾಜಿಕ ಕಳಕಳಿ ಕಾರ್ಯಕ್ರಮವನ್ನು ಈ ಬಾರಿ ಹಮ್ಮಿಕೊಳ್ಳಲಾಗಿದೆ ಎಂದು ನೂತನ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ತಿಳಿಸಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕ ಪಡೆದ ಅನೇಕ ವಿದ್ಯಾರ್ಥಿಗಳಿಗೆ ಸನ್ಮಾನಿಸಿ, ನಗದು ಹಣವನ್ನು ನೀಡಲಾಯಿತು.
ಕೋಶಾಧಿಕಾರಿ ಜಯಶ್ರೀ ಎಸ್ ಅವರನ್ನು ಈ ಸಾಲಿಗೂ ಅದೇ ಹುದ್ದೆಯಲ್ಲಿ ಮುಂದುವರೆಸಲಾಗಿದೆ. ವಲಯಾಧ್ಯಕ್ಷ ಅರವಿಂದ ಭಗವಾನ್ ರೈ, ನಿಕಟಪೂರ್ವ ಅಧ್ಯಕ್ಷ ಆನಂದ ರೈ ಕೆಯ್ಯೂರು, ಜಿಲ್ಲಾ 2ನೇ ರಾಜ್ಯಪಾಲರಾದ ವಸಂತ ಶೆಟ್ಟಿ, ಕ್ಲಬ್ನ ಕಾರ್ಯದರ್ಶಿ ಆನಂದ ಆಚಾರ್ಯ ವೇದಿಕೆಯಲ್ಲಿದ್ದರು.
ಲಯನ್ಸ್ ನ ಹಿರಿಯ ಸದಸ್ಯರುಗಳಾದ ಮುಳಿಯ ಶ್ಯಾಮ್ ಭಟ್, ಡಾ ಎ ಕೆ ರೈ, ಸುಬ್ರಹ್ಮಣ್ಯ ಕೊಳತ್ತಾಯ, ಜನಾರ್ಧನ ಭಟ್ ಬಂಗಾರಡ್ಕ, ಪ್ರಾಂಶುಪಾಲರಾದ ಗೋಪಿನಾಥ್ ಶೆಟ್ಟಿ, ಸುಂದರ್ ಗೌಡ ಹಾಗೂ ಮಂಗಳೂರು, ಸುಳ್ಯ, ಕಡಬ, ಪುತ್ತೂರು ಮತ್ತು ಪಂಜದ ಕ್ಲಬ್ನ ಇನ್ನಿತರ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಶೋಭಿತಾ ಸತೀಶ್, ಹಾಗೂ ಡಾ. ಸತೀಶ್ ರಾವ್ ಕಾರ್ಯಕ್ರಮವನ್ನು ನಿರೂಪಿಸಿದ್ರೆ, ನೂತನ ಕಾರ್ಯದರ್ಶಿ ಹರಿಪ್ರಸಾದ್ ಪಿಕೆ ವಂದಿಸಿದರು.