Thursday, January 23, 2025
ರಾಜಕೀಯ

ಗ್ರಾಮ ವಾಸ್ತವ್ಯಕ್ಕೆ ಬಂದ ಸಿಎಂ: ಮೋದಿಗೆ ವೋಟ್ ಹಾಕಿ ನನ್ನನ್ನು ಯಾಕೆ ಕೇಳ್ತೀರಾ ಎಂದು ಕಿಡಿಕಾರಿದ ಕುಮಾರಸ್ವಾಮಿ – ಕಹಳೆ ನ್ಯೂಸ್

ರಾಯಚೂರು : ರಾಯಚೂರಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯಕ್ಕೆ ಬಂದಿರುವ ಸಿಎಂ ಎಚ್.ಡಿ. ಕುಮಾರಸ್ವಾಮಿ ಮೊದಲ ದಿನವೇ ವಿವಾದದ ಕಿಡಿ ಹತ್ತಿಸಿದ್ದಾರೆ. ಸಿಎಂಗೆ ರಾಯಚೂರಿನಲ್ಲಿ ಪ್ರತಿಭಟನೆಯ ಬಿಸಿ ತಾಗಿದ್ದು, ಸಿಡಿಮಿಡಿಗೊಂಡ ಎಚ್‌ಡಿಕೆ, ಸಿಎಂ ಒಬ್ಬರು ಹೇಳಬಾರದ ಮಾತನ್ನು ಹೇಳಿದ್ದಾರೆ.  ಶಕ್ತಿನಗರದ YTPS ಕಾರ್ಮಿಕರು ಸಿಎಂ ಪ್ರಯಾಣಿಸುತ್ತಿದ್ದ ಬಸ್ಸನ್ನು ತಡೆದು ಪ್ರತಿಭಟನೆ ನಡೆಸಿದರು. ಇದರಿಂದ ಕುಪಿತರಾದ ಸಿಎಂ, ನನಗೆ ಗ್ರಾಮ ವಾಸ್ತವ್ಯನೇ ಬೇಡ, ನಾನು ಹೊರಡ್ತೀನಿ ಎಂದು ಗರಂ ಆದರು. ಜೊತೆಗೆ, ಮೋದಿಗೆ ವೋಟ್ ಹಾಕಿ ನನ್ನನ್ನು ಯಾಕೆ ಕೇಳ್ತೀರಾ ಎಂದು ಕಿಡಿಕಾರಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು