ಬೆಂಗಳೂರು: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಾಕಾರಕ್ಕಾಗಿ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ
ಶ್ರೀಗಳ ಪ್ರವಚನ ಅಂದು ಶ್ರೀರಾಮನ ಜನ್ಮಘಟ್ಟದ ಬಗ್ಗೆಯೇ ಇದ್ದು, ಇದನ್ನು ಸಂಭ್ರಮಿಸುವ ಸಲುವಾಗಿ ಶ್ರೀರಾಮನ, ಶ್ರೀಗುರುಗಳ, ಶ್ರೀಮಠದ ಶಿಷ್ಯ-ಭಕ್ತ ಅಭಿಮಾನಿಗಳು ಮನೆ ಮನೆಗಳಲ್ಲಿ ಶ್ರೀರಾಮ ಜನ್ಮೋತ್ಸವ ಆಚರಿಸಲಿದ್ದಾರೆ ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು ಮತ್ತು ಪ್ರಧಾನ ಕಾರ್ಯದರ್ಶಿ ಹರಿಪ್ರಸಾದ್ ಪೆರಿಯಾಪು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸಂಜೆ 6.45ರಿಂದ 8 ಗಂಟೆಯ ನಡುವೆ ಪ್ರತಿ ಮನೆಗಳಲ್ಲಿ ರಾಮಜಪ, ಶ್ರೀರಾಮತಾಕರ ಮಂತ್ರ ಪಠಣ, ರಾಮಭಜನೆ, ಪಾನಕ- ಪನಿವಾರ, ಪ್ರಸಾದ ವಿನಿಯೋಗ, ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿಶಿಷ್ಟ ಪರಿಕಲ್ಪನೆ ಬಗೆಗಿನ ಪ್ರಸ್ತುತಿ ಪ್ರದರ್ಶನ, ಕಾಣಿಕೆ ಸಮರ್ಪಣೆ ನಡೆಯಲಿದೆ. ಪ್ರತಿ ಮನೆಗಳಿಗೆ ಆಯಾ ಪರಿಸರದ ಸರ್ವ ಸಮಾಜದ ಬಂಧುಗಳನ್ನು ಆಮಂತ್ರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಶ್ರೀಮಠದ ಎಲ್ಲ ಶಾಖಾಮಠಗಳಲ್ಲಿ, ಸಂಘ ಸಂಸ್ಥೆಗಳಲ್ಲಿ ಸಾಮೂಹಿಕವಾಗಿ ಶ್ರೀರಾಮಜನ್ಮೋತ್ಸವ ಆಚರಿಸಲಾಗುತ್ತದೆ. ಶ್ರೀಗಳ ಪ್ರವಚನ ನಡೆಯುತ್ತಿರುವ ಗಿರಿನಗರ ಶ್ರೀರಾಮಾಶ್ರಮದಲ್ಲಿ ಶ್ರೀರಾಮನಿಗೆ ತೊಟ್ಟಿಲೋತ್ಸವ ಸೇರಿದಂತೆ ವೈವಿಧ್ಯಮಯವಾಗಿ ಶ್ರೀರಾಮ ಜನ್ಮೋತ್ಸವ ಆಚರಿಸಲಾಗುತ್ತದೆ ಎಂದು ಪ್ರಕಟಣೆ ಹೇಳಿದೆ.