Wednesday, January 22, 2025
ಸುದ್ದಿ

ಆತೂರಿನಲ್ಲಿ 93ನೇ ಸಮಸ್ತ ಸ್ಥಾಪನಾ ದಿನಾಚರಣೆ – ಕಹಳೆ ನ್ಯೂಸ್

ಆತೂರು: ವಿಶ್ವದಲ್ಲಿಯೇ ಸರಿಸಾಟಿಯಿಲ್ಲದ ಮುಸ್ಲಿಂ ಸಮುದಾಯದ ಅಶಾಕಿರಣ, ಸಮಸ್ತ ಕೇರಳ ಜಂಯಿಯ್ಯತುಲ್ ಉಲಮಾ, 93ನೇ ವರ್ಷದ ಹೊಸ್ತಿಲಲ್ಲಿದೆ. ಹಾಗಾಗಿ ಜೂನ್ 26ರಂದು ಸಮಸ್ತ ಸ್ಥಾಪನಾ ದಿನವನ್ನು ಆಚರಿಸಲಾಯಿತು. ಬದ್ರಿಯಾ ಜುಮಾ ಮಸೀದಿ ಆತೂರು ಮತ್ತು ಎಸ್‍ಕೆಎಸ್‍ಎಸ್‍ಎಫ್ ಆತೂರು ಶಾಖೆ ಇದರ ವತಿಯಿಂದ ಸಮಸ್ತ ಸ್ಥಾಪಕ ದಿನ ಪ್ರಯುಕ್ತ ಜಮಾತ್ ಅಧ್ಯಕ್ಷರಾದ ಜನಾಬ್ ಅಬ್ಬುಲ್ ರಝಕ್ ಬಿ ಇವರು ದ್ವಜಾರೋಣವನ್ನು ಆತೂರಿನಲ್ಲಿ ನೆರವೇರಿಸಿದರು. ಆತೂರು ರೇಂಜ್ ಇದರ ಪ್ರಧಾನ ಕಾರ್ಯದರ್ಶಿ ಕೆ.ಎಂ.ಎಸ್. ಸಿದ್ದೀಕ್ ಫೈಝಿ ಕರಾಯ ಸ್ವಾಗತ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಮಾತ್ ಸದ್ಯಸರಾದ ಬಿ.ರ್ ಅಬ್ಬುಲ್ ಖಾದರ್, ಬದ್ರಿಯಾ ಸ್ಕೂಲ್ ಉಪಾಧ್ಯಕ್ಷರಾದ ಓ ಪುಡಕುಂಞ ನೀರಾಜೆ, ಎಸ್‍ಕೆಎಸ್‍ಎಸ್‍ಎಫ್ ಆತೂರು ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ನೀರಾಜೆ, ಕಾರ್ಯದರ್ಶಿ ಝಕ್ರಿಯಾ ಮುಸ್ಲಿಯಾರ್ ಆತೂರು, ಸದ್ಯಸರಾದ ಹ್ಯಾರಿಸ್, ಅಬ್ಬಾಸ್, ಝಐನುದ್ದೀನ್ ಆತೂರು ಇಸ್ಮಾಯಿಲ್ ಪಾಳ್ತಡಿ, ವಿಖಾಯ ಸದ್ಯಸರು, ಮದರಸದ ಅಧ್ಯಾಪಕರು, ಮದ್ರಸದ ವಿದ್ಯಾರ್ಥಿಗಳು ಮತ್ತು ಊರಿನ ಜಮಾತಿನ್ ಸದ್ಯಸರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು