Wednesday, January 22, 2025
ಸುದ್ದಿ

ಪುತ್ತೂರಿನ ‘ಭಂಟರ ಭವನದ’ ಬಳಿ ಟ್ರಾಫಿಕ್ ಜಾಮ್ – ಕಹಳೆ ನ್ಯೂಸ್

ಪುತ್ತೂರು: ಇಂದು ಪುತ್ತೂರಿನ ‘ಭಂಟರ ಭವನ’ ಹಾಗೂ ಅದರ ಸಮೀಪವಿರುವ ಮರಾಠಿ ಭವನದಲ್ಲಿ ಸಮಾರಂಭಗಳಿದ್ದಿದ್ದರಿಂದ, ಮಧ್ಯಾಹ್ನದ ವೇಳೆ ಜನರು ಸಾಗರೋಪಾದಿಯಲ್ಲಿ ವಾಹನಗಳಲ್ಲಿ ಆಗಮಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇಲ್ಲಿನ ರಸ್ತೆಯೂ ಕಿರಿದಾಗಿದ್ದರಿಂದ ಒಂದು ಬದಿಯಿಂದ ಮಾತ್ರ ವಾಹನ ಹೋಗುವ ಸ್ಥಿತಿ ನಿರ್ಮಾಣವಾಯಿತು. ಆದರೆ ಈ ಮಧ್ಯೆ ಸಮಾರಂಭಕ್ಕೆ ತಡವಾಗುತ್ತದೆ ಎಂಬ ಧಾವಂತದಿಂದ, ನಡುವೆ ನುಗ್ಗುವ ವಾಹನಗಳಿಂದಾಗಿ ಸುಮಾರು ಹೊತ್ತಿನವರೆಗೆ ವಾಹನ ಸವಾರರು ಮತ್ತು ನಡೆದು ಹೋಗುವ ಜನರು ಪರದಾಡುವ ಪರಿಸ್ಥಿತಿ ಉಂಟಾಯಿತು. ಈ ಮಧ್ಯೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಟ್ರಾಫಿಕ್ ಪೊಲೀಸರು ದಂಡ ಹಾಕುತ್ತಿರುವುದು ಕಂಡು ಬಂದಿತು.

ಜಾಹೀರಾತು
ಜಾಹೀರಾತು
ಜಾಹೀರಾತು