Wednesday, January 22, 2025
ಸುದ್ದಿ

ಕೊಲ್ಲಿಯ ಬೊಲ್ಲಾಜೆಯಲ್ಲಿ ಗುಡ್ಡ ಕಾಡು ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ – ಕಹಳೆ ನ್ಯೂಸ್

ಬೆಳ್ತಂಗಡಿ : ಜೂನ್ 26ರಂದು ಕೊಲ್ಲಿಯ ಬೊಲ್ಲಾಜೆಯಲ್ಲಿ ಜೆಸಿಐ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಯ ಸ್ವಯಂ ಸೇವಕರು ಹಾಗೂ ಅರಣ್ಯ ಅಧಿಕಾರಿಗಳು ಸೇರಿ ಗುಡ್ಡ ಕಾಡು ಪ್ರದೇಶದಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಿದರು. ಈ ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷರು ಪ್ರಶಾಂತ ಲ್ಯಾಲ, ನಿಕಟ ಪೂರ್ವ ಅಧ್ಯಕ್ಷರು ಕಿರಣ್ ಕುಮಾರ್ ಶೆಟ್ಟಿ, ಜಿಸಿ ರೇಟ್ ಆಶಾಲತ ಪಿ, ಲ್ಯಾಲ ಜೆಜೆಸಿ ವಿನಾಯಕ ಪ್ರಸಾದ್, ಅರಣ್ಯ ಇಲಾಖೆಯ ಸಿಬ್ಬಂದಿ ಆರ್‍ಎಫ್‍ಒ ಸುಬ್ಬಯ್ಯ ನಾಯ್ಕ್, ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಕೆ, ಅರಣ್ಯ ರಕ್ಷಕ ಆನಂದ್ ಮೋಹಿತ್, ಅರಣ್ಯ ವೀಕ್ಷಕ ರಾಜೇಶ್, ಬೆಳ್ತಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಕಾರ್ಯಕ್ರಮವನ್ನು ನೆರವೇರಿಸಿದರು. ದೇಶ ಸೇವೆಯಲ್ಲಿ ಸೈನಿಕರು ಇರುವ ಹಾಗೆ ಕಾಡಿನ ರಕ್ಷಣೆಯಲ್ಲಿ ಜೆಸಿಐ ಹಾಗೂ ಎನ್‍ಎಸ್‍ಎಸ್ ನವರು ಇರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು