Tuesday, January 21, 2025
ಸುದ್ದಿ

ಉಪ್ಪಿನಂಗಡಿ: ಜೂನ್ 29ಕ್ಕೆ ರಾಮಕುಂಜದಲ್ಲಿ ತುಳು ಕೂಟ ಸದಸ್ಯರ ‘ರಸಮಂಟಮೆ’ – ಕಹಳೆ ನ್ಯೂಸ್

ಉಪ್ಪಿನಂಗಡಿ: ಇದೇ ಬರುವ ಜೂನ್ 29ರಂದು ಶನಿವಾರ ಬೆಳಗ್ಗೆ 9:30ಕ್ಕೆ ಸರಿಯಾಗಿ ಶ್ರೀ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ, ನೇತ್ರಾವತಿ ತುಳು ಕೂಟ ರಾಮಕುಂಜ(ರಿ) ಸಹಯೋಗದೊಂದಿಗೆ, ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆ ರಾಮಂಕುಂಜದ ಆಶ್ರಯದಲ್ಲಿ, ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ, ‘ತುಳು ಕಲಿಯುತ್ತಿರುವ ವಿದ್ಯಾರ್ಥಿಗಳ, ತುಳುಕೂಟಗಳ ಸದಸ್ಯರ ‘ರಸಮಂಟಮೆ’ ಎಂಬ ಕಾರ್ಯಕ್ರಮವು ನಡೆಯಲಿದೆ.

ಬೆಳಗ್ಗೆ 10:30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಅಖಿಲ ಭಾರತ ತುಳು ಒಕ್ಕೂಟ, ಕುಡ್ಲ ಇದರ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ನಿಟ್ಟೆ ದೀಪ ಬೆಳಗಿಸಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ.ಸಿ.ಭಂಡಾರಿ ವಹಿಸಲಿದ್ದಾರೆ. ‘ದೊಂಪದ ಬಲಿ’ ಪುಸ್ತಕದ ಲೋಕಾರ್ಪಣೆಯನ್ನು ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್ ಮಾಡಲಿದ್ದಾರೆ. ಜೊತೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ರಾಮಕುಂಜ ಗ್ರಾಮ ಪಂಚಾಯತ್‍ನ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ, ಗೋಪಾಲ ಶೆಟ್ಟಿ ಕಳಂಜೆ, ಡಾ.ಆಕಾಶ್ ರಾಜ್ ಆಲುಪ, ಡಾ.ಸದಾನಂದ ಪೆರ್ಲ, ಸುಕನ್ಯಾ ಡಿ.ಎನ್, ಕೃಷ್ಣಮೂರ್ತಿ ಇ ಕಲ್ಲೇರಿ, ಡಾ.ರಾಜಾರಾಮ್, ಮಹೇಂದ್ರನಾಥ್ ಸಾಲೆತ್ತೂರ್, ಮುಂತಾದವರು ಆಗಮಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಸಾಯಂಕಾಲ 4:30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ ಸೇಸಪ್ಪ ರೈ, ಮುಖ್ಯ ಅತಿಥಿಗಳಾಗಿ ಚಿದಾನಂದ ನಾಯಕ್, ಡಾ.ನಿರಂಜನ ರೈ ಮುಂತಾದವರು ಇರಲಿದ್ದಾರೆ.

ಈ ಸಂಧರ್ಭದಲ್ಲಿ ನಡೆಯಲಿರುವ ಸ್ಪರ್ಧೆಗಳ ವಿವರ:
ಶಾಲಾ ಮಕ್ಕಳಿಗಾಗಿ ವೈಯಕ್ತಿಕ ಸ್ಪರ್ಧೆಗಳು
ತುಳು ಜಾನಪದ ಕವಿತೆ (3 ನಿ.). ತುಳು ಭಾವ ಗೀತೆ(5 ನಿ). ಮಡಲಿನಿಂದ ಕರಕುಶಲ ವಸ್ತುಗಳ ತಯಾರಿ(30 ನಿ). ತುಳುವರ ಹಳ್ಳಿ ಜೀವನದ ಚಿತ್ರಕಲೆ(30 ನಿ). ತುಳು ಭಾಷಣ(5 ನಿ). ತುಳು ಜಾನಪದ ಕತೆ(6 ನಿ). ತುಳು ಗಾದೆ(5 ನಿ).

ಇಬ್ಬರಿಗೆ ನಡೆಯುವ ಸ್ಪರ್ಧೆಗಳು
ಒಗಟು(10 ನಿ). ರಸ ಪ್ರಶ್ನೆ(10 ನಿ.).

ಗುಂಪಿನಲ್ಲಿ ನಡೆಯುವ ಸ್ಪರ್ಧೆಯ ವಿವರ:
ತುಳು ಜನಪದ ಕುಣಿತ(8 ನಿ).

ತುಳುಕೂಟದ ಸದಸ್ಯರಿಗೆ ವೈಯಕ್ತಿಕ ಸ್ಪರ್ಧೆಗಳು:
ತುಳು ಜಾನಪದ ಕವಿತೆ (3 ನಿ.). ತುಳು ಭಾವ ಗೀತೆ(5 ನಿ). ತುಳು ಗಾದೆ(5 ನಿ). ಮಡಲಿನಿಂದ ಕರಕುಶಲ ವಸ್ತುಗಳ ತಯಾರಿ(30 ನಿ). ತುಳುವರ ಹಳ್ಳಿ ಜೀವನದ ಚಿತ್ರಕಲೆ(30 ನಿ). ತುಳು ಭಾಷಣ(5 ನಿ).

ಗುಂಪು ಸ್ಪರ್ಧೆಗಳು:
ತುಳು ಜನಪದ ಕುಣಿತ(8 ನಿ).