Tuesday, January 21, 2025
ಸುದ್ದಿ

ಅಪ್ರಾಪ್ತ ಬಾಲಕಿಯ ಮೇಲೆ ತಂದೆಯಿಂದಲೇ ಅತ್ಯಾಚಾರ – ಕಹಳೆ ನ್ಯೂಸ್

ಬಂಟ್ವಾಳ: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ತಂದೆಯಿಂದಲೇ ಅತ್ಯಾಚಾರ ನಡೆದು ಗರ್ಭವತಿಯಾದ ಘಟನೆ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದಲ್ಲಿ ನಡೆದಿದೆ. ಬಾಲಕಿಯ ತಮ್ಮ ಹಾಗೂ ತಂಗಿಯಂದಿರು ತಂದೆ ತಾಯಿಯ ಜೊತೆಯಲ್ಲಿ ಹಾಗೂ ಬಾಲಕಿಯು ಪ್ರತ್ಯೇಕ ಕೋಣೆಯಲ್ಲಿ ಮಲಗುತ್ತಿದ್ದರು.

ಫೆ. 8ನೇ ತಾರೀಕಿನಂದು ಮಧ್ಯರಾತ್ರಿ ಮನೆಯಲ್ಲಿ ಎಲ್ಲರೂ ನಿದ್ದೆಯಲ್ಲಿದ್ದಾಗ ಬಾಲಕಿಯ ತಂದೆ, ತನ್ನ ಮಗಳೊಂದಿಗೇ ಅನುಚಿತ ವರ್ತನೆ ತೋರಿದ್ದಾನೆ. ಇದರಿಂದ ಹೆದರಿದ ಬಾಲಕಿ ಕೂಗಾಡಿದಾಗ ತಂದೆ ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿ ಬಲತ್ಕಾರ ಮಾಡಿದ್ದಾನೆಂದು ಮಗಳು ದೂರಿದ್ದಾಳೆ. ಆ ಬಳಿಕವೂ ಪಾಪಿ ತಂದೆ ತನ್ನ ಮಗಳನ್ನು ತನ್ನ ಕಾಮ ತೃಷೆಗೆ ಬಳಸಿಕೊಂಡಿದ್ದಾನೆ. ಈಗ ಬಾಲಕಿ ಗರ್ಭಿಣಿಯಾಗಿದ್ದು, ತಂದೆಯ ಕಿರುಕುಳ ತಾಳಲಾರದೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಸದ್ಯ ಪ್ರಕರಣ ತನಿಖೆಯಲ್ಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು