Tuesday, January 21, 2025
ಸಿನಿಮಾ

ಶಾಹಿದ್ ಕಪೂರ್ ‘ಕಬೀರ್ ಸಿಂಗ್’ನ ನಾಗಾಲೋಟಕ್ಕೆ ಬೀಳುತ್ತಾ ಬ್ರೇಕ್ – ಕಹಳೆ ನ್ಯೂಸ್

ಟಾಲಿವುಡ್ ಸೂಪರ್ ಹಿಟ್ ಸಿನಿಮಾ ‘ಅರ್ಜುನ್ ರೆಡ್ಡಿ’ ಹಿಂದಿ ರೀಮೇಕ್ ‘ಕಬೀರ್ ಸಿಂಗ್’ ಕಳೆದ ಶುಕ್ರವಾರ ಬಿಡುಗಡೆಯಾಗಿ, ಎಲ್ಲ ಕಡೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ಬಾಕ್ಸ್ ಆಫೀಸ್‍ನಲ್ಲಿ ಮಾತ್ರ ಚಿತ್ರವು ಭರ್ಜರಿ ಕಲೆಕ್ಷನ್ ದಾಖಲಿಸುತ್ತಿದೆ. ದಿನದಿಂದ ದಿನಕ್ಕೆ ಗಳಿಕೆ ಹೆಚ್ಚಿಸಿಕೊಳ್ಳುತ್ತಿರುವ ಕಬೀರ್ ಸಿಂಗ್, ಐದು ದಿನಕ್ಕೆ ನೂರು ಕೋಟಿ ಕ್ಲಬ್ ಸೇರಿದೆ. ಈ ಮೂಲಕ ವರ್ಷದ ಸೂಪರ್ ಹಿಟ್ ಚಿತ್ರಗಳ ಟಾಪ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದೆ.

ಆದರೆ ಈ ಚಿತ್ರಕ್ಕೆ ಇದೀಗ ಸಂಕಷ್ಟ ಎದುರಾಗಿದೆ. ಸಿನಿಮಾ ಪ್ರದರ್ಶನ ನಿಲ್ಲಿಸುವಂತೆ ನಿರ್ಮಾಪಕರ ವಿರುದ್ಧ ದೂರು ದಾಖಲಾಗಿದೆ. ‘ಕಬೀರ್ ಸಿಂಗ್’ ಚಿತ್ರ ಪ್ರದರ್ಶನ ನಿಲ್ಲಿಸುವಂತೆ ಮುಂಬೈ ಮೂಲದ ವೈದ್ಯರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಕಬೀರ್ ಸಿಂಗ್’ ಚಿತ್ರದಲ್ಲಿ ವೈದ್ಯ ವೃತ್ತಿಯನ್ನು ಅವಮಾನಿಸುವ ರೀತಿ ತೋರಿಸಲಾಗಿದೆ ಎಂದು ಮುಂಬೈ ಮೂಲದ ವೈದ್ಯರೊಬ್ಬರು ಆರೋಪಿಸಿದ್ದಾರೆ. ಈ ಸಿನಿಮಾದಲ್ಲಿ ನಾಯಕ ನಟ ಶಾಹೀದ್ ಕಪೂರ್ ಸರ್ಜನ್ ಪಾತ್ರ ನಿಭಾಯಿಸಿದ್ದಾರೆ. ಯಾವಾಗಲೂ ಕುಡಿದ ಮತ್ತಿನಲ್ಲೇ ಇರುವ ವೈದ್ಯನ ಪಾತ್ರ ಇದಾಗಿದ್ದು, ಡ್ರಗ್ಸ್ ಚಟಕ್ಕೂ ಬಲಿಯಾಗಿರುತ್ತಾರೆ. ಇದು ವೈದ್ಯರ ಬಗ್ಗೆ ಅಗೌರವ ತೋರುವಂತಿದೆ. ವೈದ್ಯ ವೃತ್ತಿ ಬಗ್ಗೆ ಅವಹೇಳನ ಮಾಡುವಂತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾಗಿ, ಈ ಚಿತ್ರದ ಸೆನ್ಸಾರ್ ಪ್ರಮಾಣ ಪತ್ರವನ್ನ ರದ್ದು ಮಾಡಬೇಕು’ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ಸಿನಿಮಾ ಬಗ್ಗೆ ದೂರು ನೀಡಿ ನ್ಯಾಯಾಲಯದ ಮೊರೆ ಹೋಗಿರುವ ವೈದ್ಯರು, ಈ ಸಿನಿಮಾದಿಂದ ಡಾಕ್ಟರ್‍ ಗಳ ಇಮೇಜ್‍ಗೆ ಧಕ್ಕೆಯಾಗುತ್ತಿದೆ. ವೈದ್ಯ ವೃತ್ತಿ ಎಂಬುದು ಪವಿತ್ರವಾದ ಕೆಲಸ. ಅಂತಹ ವೃತ್ತಿಯ ಬಗ್ಗೆ ಜನರಿಗೆ ತಪ್ಪು ತಿಳುವಳಿಕೆ ಮೂಡುವಂತಿದೆ ಎಂದಿದ್ದಾರೆ.

ಕಬೀರ್ ಸಿಂಗ್ ಚಿತ್ರ ತೆಲುಗಿನ ‘ಅರ್ಜುನ್ ರೆಡ್ಡಿ’ ಸಿನಿಮಾದ ರೀಮೇಕ್. ಅರ್ಜುನ್ ರೆಡ್ಡಿ ಚಿತ್ರವು ತುಂಬಾ ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ಆಗ ಯಾವ ರೀತಿಯಲ್ಲೂ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ, ಈ ಚಿತ್ರವು ಹಿಂದಿ ರೂಪ ತಾಳಿ ಇದೀಗ ಬಿಡುಗಡೆಯಾಗಿರುವಾಗ ಈ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ.