ಕೃಷಿಕರಿಗೆಂದು ರೂಪಿತವಾದ ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ.
ಅತೀ ಸಣ್ಣ ಹಾಗೂ ಸಣ್ಣ ಹಿಡುವಳಿದಾರರಿಗೆ ನೀಡಲಾಗುವ ಈ ಯೋಜನೆಯಿಂದ ಸಹಾಯಧನ ಪಡೆಯಲಿಚ್ಚಿಸುವ ರೈತರು ಜೂ.30ರ ಒಳಗಾಗಿ ತಮ್ಮ ಗುರುತಿನ ದಾಖಲೆ ಪತ್ರ ಆಧಾರ್ ಕಾರ್ಡ್, ಪಹಣಿಪತ್ರ, ಬ್ಯಾಂಕ್ ಪಾಸ್ ಪುಸ್ತಕ, ಒಂದು ಫೋಟೋ ಸಮೇತ ಗ್ರಾಮಪಂಚಾಯತ್, ಕೃಷಿ ಜನಪಂಪರ್ಕ ಕೇಂದ್ರಗಳಿಗೆ ತೆರಳಿ ಅರ್ಜಿ ಸಲ್ಲಿಸಬಹುದಾಗಿದೆ.