Saturday, November 23, 2024
ಸುದ್ದಿ

ಕೊಂಬೆಟ್ಟು ಪೌಢಶಾಲೆಯ ಶಿಕ್ಷಕರನ್ನು ಹೆಚ್ಚುವರಿಯೆಂದು ಪರಿಗಣಿಸದಂತೆ ಉಪನಿರ್ದೇಶಕರಿಗೆ ನಿರ್ದೇಶನ ಕೊಡಲು ಶಾಸಕರಿಗೆ ಮನವಿ – ಕಹಳೆ ನ್ಯೂಸ್

ಪುತ್ತೂರು: ಕೊಂಬೆಟ್ಟು ಸರ್ಕಾರಿ ಪದವಿ ಪೂರ್ವ ಕಾಲೇಜು ಪೌಢಶಾಲಾ ವಿಭಾಗದಲ್ಲಿ ಶಿಕ್ಷಕರು ಹೆಚ್ಚುವರಿಯಾಗಿಲ್ಲ. ಇರುವ 19 ಶಿಕ್ಷಕರು ಶಾಲೆಗೆ ಅಗತ್ಯವಿದ್ದು, ನಮ್ಮ ಶಾಲೆಯ ಶಿಕ್ಷಕರನ್ನು ಹೆಚ್ಚುವರಿಯಾಗಿ ಪರಿಗಣಿಸಬಾರದೆಂದು ಜಿಲ್ಲಾ ಉಪನಿರ್ದೇಶಕರಿಗೆ ನಿರ್ದೇಶನ ಕೊಡುವಂತೆ ಪುತ್ತೂರು ಶಾಸಕ ಸಂಜೀವ ಮಠಂದೂರು ಅವರಿಗೆ ಮನವಿಯನ್ನು ಮಾಡಿದರು. ಕಾಲೇಜಿನ ಪ್ರಾಂಶುಪಾಲರು, ಶಿಕ್ಷಕರು, ಸ್ಥಳೀಯ ನಗರಸಭೆ ಸದಸ್ಯ ಪಿಜಿ ಜಗನ್ನಿವಾಸ್ ರಾವ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಟಲ್ ಟಿಂಕರಿಂಗ್ ಲ್ಯಾಬ್ ನಮ್ಮ ಶಾಲೆಯಲ್ಲಿ ಕಾರ್ಯನಿರತವಾಗಿದ್ದು ಲ್ಯಾಬ್‍ನ ಪ್ರಾಯೋಜಕತ್ವದಲ್ಲಿ 635 ವಿದ್ಯಾರ್ಥಿಗಳನ್ನು ಒಳಪಡಿಸುವ ದೊಡ್ಡ ಜವಾಬ್ದಾರಿಯಿದೆ. ಸಂಸ್ಥೆಯಲ್ಲಿ 635 ವಿದ್ಯಾರ್ಥಿಗಳಿದ್ದು, 13 ತರಗತಿಗಳಿವೆ. ಇನ್ನೂ ವಿದ್ಯಾರ್ಥಿಗಳು ದಾಖಲಾಗುವ ನೀರಿಕ್ಷೆಯಿದ್ದು, ಎಲ್ಲಾ 19 ಶಿಕ್ಷಕರ ಅಗತ್ಯವಿರುವುದನ್ನು, ಶಿಕ್ಷಕರ ಹೆಚ್ಚುವರಿ ಎಂದು ಪರಿಗಣಿಸಬಾರದೆಂದು ಮನವಿಯಲ್ಲಿ ತಿಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು