Monday, January 20, 2025
ಸಿನಿಮಾ

ಯಶ್ ಮಗಳ ಹೆಸರು ಐರಾದ ನಿಜವಾದ ಅರ್ಥ ಇದು ನೋಡಿ… – ಕಹಳೆ ನ್ಯೂಸ್

ಮತ್ತೊಮ್ಮೆ ತಂದೆ-ತಾಯಿಯಾಗುವ ವಿಚಾರವನ್ನು ಸ್ಯಾಂಡಲ್‍ವುಡ್‍ನ ಸ್ಟಾರ್ ದಂಪತಿ ಯಶ್ ಮತ್ತು ರಾಧಿಕಾ ಪಂಡಿತ್ ಬಹಿರಂಗಗೊಳಿಸುತ್ತಿದ್ದಂತೆ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ವೈರಲ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೊದಲ ಮಗುವಿಗೆ ಈಗಷ್ಟೇ 6 ತಿಂಗಳು ತುಂಬಿದ್ದು ಇತ್ತೀಚಿಗೆ ನಾಮಕರಣ ಮಾಡಿ ‘ಐರಾ ಯಶ್’ ಎಂದು ಹೆಸರಿಟ್ಟಿದ್ದರು. ಇದೀಗ ಮತ್ತೊಮ್ಮೆ ಗರ್ಭಿಣಿಯಾಗಿರುವ ಕುರಿತು ರಾಧಿಕಾ ಪಂಡಿತ್ ಮಾತನಾಡಿದ್ದಾರೆ. ನಾವಿಬ್ಬರು ಅಭಿನಯಿಸಿದ ಮಿಸ್ಟರ್ ಆ್ಯಂಡ್ ಮಿಸಸ್ ರಾಮಚಾರಿ ಸಿನಿಮಾದಲ್ಲಿ ಒಂದು ಹಾಡಿದೆ. ಅದರಂತೆ ನಮ್ಮ ಜೀವನದಲ್ಲಿ ಆಗಿದೆ ಎಂದರು. ನಾನು ಬಹಳ ಲಕ್ಕಿ ಎನಿಸುತ್ತಿದೆ. ಮತ್ತೊಮ್ಮೆ ನಮ್ಮ ಜೀವನದಲ್ಲಿ ಒಳ್ಳೆಯ ಘಟನೆ ಮರುಕಳಿಸುತ್ತಿದೆ. ದೇವರ ಆಶೀರ್ವಾದದಿಂದ ಒಳ್ಳೆಯದಾಗುತ್ತಿದ್ದು, ಮುಂದಿನ ಉತ್ತಮ ದಿನಗಳಿಗಾಗಿ ಎದುರು ನೋಡುತ್ತಿದ್ದೇವೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳು ಅಂದರೇನೆ ಖುಷಿ. ಆದ್ದರಿಂದ ಗಂಡು ಮಗು, ಹೆಣ್ಣು ಮಗು ಅಂತಾ ಯಾವುದೇ ವ್ಯತ್ಯಾಸ ಮಾಡೋದಿಲ್ಲ. ವೈದ್ಯರ ಸಲಹೆ ಪಡೆದು ಎಲ್ಲವೂ ಓಕೆ ಎಂದ ಮೇಲೆಯೇ ನಾವು ಮತ್ತೊಂದು ಮಗುವಿಗೆ ಸಿದ್ಧವಾಗಿರೋದು ಎಂದು ಹೇಳಿದರು. ಅಲ್ಲದೇ ವೈರಲ್ ಆಗ್ತಿರೋ ಮಗಳ ವೀಡಿಯೋಗೆ ರವಿ ಬಸ್ರೂರು ಮಗಳ ಸಾಂಗ್ ಕಂಪೋಸ್ ಮಾಡಿದ್ದರು ಅನ್ನೋದನ್ನು ಸಹ ಇದೇ ವೇಳೆ ರಾಧಿಕಾ ಹೇಳಿದ್ರು.

ಮಗಳಿಗೆ ಲಕ್ಷ್ಮೀ ದೇವರ ಹೆಸರಿನಲ್ಲೇ ನಾಮಕರಣ ಮಾಡೋಕೆ ಚಿಂತಿಸಿದ್ದೆವು. ‘ಐರಾ’ ಲಕ್ಷ್ಮೀ ದೇವತೆಯ ಹೆಸರು. ಈ ಹೆಸರು ಇಡಲು ತುಂಬಾ ಸಮಯ ತೆಗೆದುಕೊಂಡಿದ್ವಿ. ಮಗಳು ಹುಟ್ಟಿದ ಮೇಲೆ ಎಲ್ಲವೂ ಒಳ್ಳೆಯದಾಯಿತು ಎಂದರು.