Monday, January 20, 2025
ಕ್ರೀಡೆ

ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಹೈವೋಲ್ಟೇಜ್ ಪಂದ್ಯ – ಕಹಳೆ ನ್ಯೂಸ್

ಮ್ಯಾಂಚೆಸ್ಟರ್: ವಿಶ್ವಕಪ್ ಕೂಟದ 34ನೇ ಪಂದ್ಯವು ಮ್ಯಾಂಚೆಸ್ಟರ್‍ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆಯುತ್ತಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಈ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಭಾರತ ತಂಡ ಈ ಪಂದ್ಯಕ್ಕೆ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ. ವಿರಾಟ್ ಪಡೆಯು ಕಳೆದ ಬಾರಿ ಕಣಕ್ಕಿಳಿಸಿದ ಆಟಗಾರರನ್ನೇ ಮತ್ತೆ ಕಣಕ್ಕಿಳಿಸಲಾಗಿದೆ. ಆದರೆ ವಿಂಡೀಸ್ ಎರಡು ಬದಲಾವಣೆ ಮಾಡಿದೆ. ಇವಿನ್ ಲೂಯಿಸ್ ಬದಲು ಸುನೀಲ್ ಆಂಬ್ರಿಸ್ ಸ್ಥಾನ ಪಡೆದರೆ, ಆಶ್ಲೆ ನರ್ಸ್ ಬದಲು ಫ್ಯಾಭಿನ್ ಅಲೆನ್ ತಂಡ ಸೇರಿದ್ದಾರೆ. ಭಾರತ ಈ ಪಂದ್ಯ ಗೆದ್ದರೆ ತನ್ನ ಸೆಮಿ ಹಾದಿಯನ್ನು ಇನ್ನಷ್ಟು ಸುಲಭಗೊಳಿಸಲಿದೆ. ಆದರೆ ವೆಸ್ಟ್ ಇಂಡೀಸ್ ಈ ಪಂದ್ಯ ಸೋತರೆ ಸೆಮಿ ರೇಸ್‍ನಿಂದಲೇ ಹೊರ ಬೀಳುವುದು ಖಚಿತವೆನಿಸಿದೆ. ಹೀಗಾಗಿ ಎರಡೂ ಟೀಮ್‍ಗಳ ನಡುವೆ ಗೆಲುವಿನ ಹಣಾಹಣಿ ನಡೆಯುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವಿಶ್ವಕಪ್ ಕೂಟದಲ್ಲಿ ಈ ಮೈದಾನದಲ್ಲಿ ಇದುವರೆಗೆ ಮೂರು ಪಂದ್ಯಗಳು ನಡೆದಿದ್ದು, ಮೂರು ಹೈ ಸ್ಕೋರಿಂಗ್ ಪಂದ್ಯಗಳಾಗಿವೆ. ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು 336, 397 ಮತ್ತು 291 ರನ್ ಗಳಿಸಿವೆ. ವಿಶೇಷವೇನೆಂದರೆ ಈ ಮೂರು ಪಂದ್ಯಗಳನ್ನು ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಜಯಿಸಿವೆ.
ಜೊತೆಗೆ ವೆಸ್ಟ್ ಇಂಡೀಸ್ ಸೋತರೆ ಕ್ರಿಸ್ ಗೈಲ್ ಕ್ರಿಕೆಟ್ ಲೋಕಕ್ಕೆ ಗುಡ್ ಬೈ ಹೇಳುತ್ತಾರೆ ಅನ್ನುವ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು