Saturday, November 23, 2024
ಸುದ್ದಿ

Breaking News : ಲಂಚ ಸ್ವೀಕರಿಸಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ ಜಾಮೀನು ಅರ್ಜಿ ವಜಾ – ಕಹಳೆ ನ್ಯೂಸ್

ಪುತ್ತೂರು : ಕ್ಯಾಟರಿಂಗ್ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದಾಗಲೇ ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ಜೂ.27 ರ ಗುರುವಾರ ವಜಾಗೊಳಿಸಿದೆ.

ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್‌ ಅವರು ಜಾಮೀನು ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು. ವಾದ -ಪ್ರತಿವಾದ ಆಲಿಸಿದ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಮುರಳೀಧರ ಪೈ ಅವರು ಜಾಮೀನು ಅರ್ಜಿ ವಜಾಗೊಳಿಸಿ ಆದೇಶಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಜೈಲಿನಲ್ಲಿರುವ ಡಾ. ಪ್ರದೀಪ್ ಕುಮಾರ್‌ ಅವರ ಪರ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಭ್ರಷ್ಟಾಚಾರ ನಿಗ್ರಹದಳದ ಪರ ವಕೀಲರಾದ ವಿಶೇಷ ಸರಕಾರಿ ಅಭಿಯೋಜಕ ಕೆ. ಎಸ್.ಎನ್. ರಾಜೇಶ್ ಅವರು ತಹಶೀಲ್ದಾರ್ ಪ್ರದೀಪ್ ಅವರಿಗೆ ಜಾಮೀನು ನೀಡುವುದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದರು. ವಕೀಲರ ವಾದ ಪ್ರತಿವಾದ ಆಲಿಸಿದ್ದ ನ್ಯಾಯಾಧೀಶ ಮುರಳೀಧರ ಪೈಯವರು ಜೂನ್ 27ರಂದು ಆದೇಶ ಪ್ರಕಟಿಸಿದ್ದು ಡಾ. ಪ್ರದೀಪ್‌ರವರ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದ್ದಾರೆ.

ಘಟನೆಯ ಹಿನ್ನಲೆ:

ಜೂ.20 ರ ಗುರುವಾರ ಕ್ಯಾಟರಿಂಗ್ ಮಾಲೀಕರೊಬ್ಬರಿಂದ ಲಂಚ ಪಡೆಯುತ್ತಿದ್ದಾಗಲೇ ಪುತ್ತೂರು ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು. ಲೋಕಸಭೆ ಚುನಾವಣೆ ವೇಳೆ ಅಧಿಕಾರಿಗಳಿಗೆ ಊಟ, ಉಪಹಾರ ಸರಬರಾಜು ಮಾಡಿದ್ದ ಪುತ್ತೂರಿನ ಪೈ ಕ್ಯಾಟರಿಂಗ್ ಅವರಿಂದ ತಹಶೀಲ್ದಾರ್ 1.20 ಲಕ್ಷ. ಲಂಚ ಸ್ವೀಕರಿಸುತ್ತಿದ್ದರು. ಈ ಸಂದರ್ಭ ಎಸಿಬಿ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಲಂಚದ ಹಣದ ಸಮೇತ ತಹಶೀಲ್ದಾರ್ ಅವರನ್ನು ಬಂಧಿಸಿದ್ದಾರೆ. ಕ್ಯಾಟರಿಂಗ್ ಬಿಲ್ 9.37 ಲಕ್ಷ ರೂ. ಬಿಲ್ ಪಾಸು ಮಾಡಬೇಕಾಗಿದ್ದ ತಹಶೀಲ್ದಾರ್ ಕ್ಯಾಟರಿಂಗ್ ಮಾಲೀಕರಿಂದ ಲಂಚ ಕೇಳಿದ್ದಾರೆ. ಈ ಸಂಬಂಧ ಕ್ಯಾಟರಿಂಗ್ ಮಾಲೀಕ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.