Saturday, November 23, 2024
ಸುದ್ದಿ

ಅಕ್ರಮ ಗೋಸಾಗಟ ತಡೆದ ಯುವಕರ ಮೇಲೆ ಪೋಲೀಸ್ ಧರ್ಪ ; ನಡುರಾತ್ರಿ ಉಪ್ಪಿನಂಗಡಿ ಠಾಣೆಯಲ್ಲಿ ಕಾರ್ಯಕರ್ತರ ಪರ ಶಾಸಕ ಪೂಂಜ ಗರ್ಜನೆ – ಕಹಳೆ ನ್ಯೂಸ್

ಉಪ್ಪಿನಂಗಡಿ ಜೂ.28: ಜೂ.27ರಂದು ತಡರಾತ್ರಿ ಸಮಯದಲ್ಲಿ ಬಂದಾರು ಸಮೀಪ ಅಕ್ರಮವಾಗಿ ಗೋಸಾಗಾಟ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ಹಿಂದೂಸಂಘಟನೆಯ ಕಾರ್ಯಕರ್ತರು ಗೋಕಳ್ಳರ ವಾಹನವನ್ನು ತಡೆದು ಉಪ್ಪಿನಂಗಡಿ ಪೋಲಿಸರಿಗೆ ಒಪ್ಪಿಸಿದ ನಂತರ ಗೋ ರಕ್ಷಣೆ ಮಾಡಿದ 3 ಜನರ ಮೇಲೆ ಕೇಸ್ ದಾಖಲಾದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು


ಈ ಘಟನೆಯ ಮಾಹಿತಿ ಸಿಕ್ಕ ತಕ್ಷಣ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜ ತಡರಾತ್ರಿ ಉಪ್ಪಿನಂಗಡಿ ಠಾಣೆಗೆ ದೌಡಾಯಿಸಿ ಕಾರ್ಯಕರ್ತರಿಗೆ ಧೈರ್ಯ ತುಂಬಿ ,ಪೋಲೀಸ್ ಠಾಣೆಯ ಮೆಟ್ಟಲಿನಲ್ಲೇ ಕುಳಿತು ಪ್ರತಿಭಟನೆ ಮಾಡಿದರು.
ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಪೂಂಜಾ, ಘಟನೆ ನಡೆದಲ್ಲಿ ನೆರೆದಿದ್ದವರ ಮೇಲೆ ಪೋಲೀಸರು ವಿನಾಕಾರಣ ಲಾಠಿ ಚಾರ್ಜ್ ಮಾಡಿದ್ದಾರೆ, ಅಲ್ಲಿಧ್ದ ಬೈಕ್ ಗಳನ್ನು ಯಾವೂದೇ ಭದ್ರತಾ ಕ್ರಮ ಕೈಗೊಳ್ಳದೇ ಲಾರಿಯಲ್ಲಿ ತುಂಬಿಸಿಕೊಂಡು ಬರಲಾಗಿದೆ.

ಪ್ರಮುಖ ಗೋ ಕದಿಯುವ ಆರೊಪಿಯನ್ನೇ ಬಿಡಲಾಗಿದೆ, ನಮ್ಮ ಹಿಂದೂ ಸಂಘಟನೆಯ ಮೂವರನ್ನು ಚಡ್ಡಿಯಲ್ಲಿ ನಿಲ್ಲಿಸಿದ್ದಾರೆ. ಪೋಲೀಸ್ ಇಲಾಖೆ ಹೀಗೆಲ್ಲ ನಡೆದುಕೊಳ್ಳುವುದು ಸರಿಯಾದ ಕ್ರಮವಲ್ಲ ಎಂದು ಪೋಲೀಸ್ ಇಲಾಖೆಯ ಮೇಲೆ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಗೋ ಹಂತಕರು ತಲವಾರು ಹಿಡಿದು ಗೋವುಗಳನ್ನು ಕದಿಯುತಿದ್ದಾರೆ. ಗೋ ರಕ್ಷಕರು ಅನಿವಾರ್ಯತೆಯಾದರೇ ತಲವಾರು ಹಿಡಿಯಬೇಕಾಗುತ್ತದೆ ಎಂದರು.