ಪುತ್ತೂರು: ಪುತ್ತೂರು ಮತ್ತು ಆಸುಪಾಸಿನ ಪರಿಸರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಮೇಘ ಕಲಾ ಆರ್ಟ್ಸ್ ಗೆ ಈಗ ಒಂದು ವರ್ಷದ ಸಂಭ್ರಮವನ್ನು ಆಚರಿಸುತ್ತಿದೆ.
ಪುತ್ತೂರಿನಲ್ಲಿ ಹೊಸ ಹೆಜ್ಜೆಯನ್ನಿರಿಸಿ ರೂಪುಗೊಂಡ ಈ ಸಂಸ್ಥೆ ಸದಾ ಕಲಾವಿದನ ಸೇವೆಗಾಗಿ ಮತ್ತು ಕಲೆಯ ಉಳಿವಿಗಾಗಿ ಮುಡಿಪಾಗಿಟ್ಟಿದೆ. ಶಾರದಾ ದಾಮೋದರ್ ರವರ ಕನಸಿನ ಕೂಸಾಗಿರುವ ಈ ಸಂಸ್ಥೆ ಕಳೆದೊಂದು ವರ್ಷದಿಂದ ನೃತ್ಯ ತರಗತಿಗಳನ್ನು ಹಮ್ಮಿಕೊಂಡು ಬರುತ್ತಿದೆ.
ಹಾಗೇ ಕಲಾರಂಗದ ವೇಷಭೂಷಣಗಳನ್ನು ಸೂಕ್ತ ಸಮಯಕ್ಕೆ ಕಲಾವಿದರಿಗೆ ಬಾಡಿಗೆ ರೂಪದಲ್ಲಿ ನೀಡುತ್ತಿದೆ. ಜೊತೆಗೆ ಛದ್ಮವೇಷ, ಭರತನಾಟ್ಯ, ಜಾನಪದ, ಯಕ್ಷಗಾನ, ಫಿಲ್ಮೀ ಡ್ಯಾನ್ಸ್, ಮೇಕಪ್, ರಸಮಂಜರಿ, ಸ್ಟೇಜ್ ಸೆಟ್ಟಿಂಗ್, ನೃತ್ಯ ಸಂಯೋಜನೆ ಹೀಗೆ ಇನ್ನಿತರ ಸೇವೆಗಳನ್ನು ನೀಡುತ್ತಿದೆ.