Monday, January 20, 2025
ಸುದ್ದಿ

ಬಿ.ಸಿ ರೋಡಿನಲ್ಲಿ ಸೆಲೂನ್‍ನಿಂದ 18 ಸಾವಿರ ದೋಚಿದ ಕಳ್ಳರು – ಕಹಳೆ ನ್ಯೂಸ್

ಬಂಟ್ವಾಳ: ಬಿ.ಸಿ ರೋಡ್ ತಾಲೂಕು ಪಂಚಾಯತ್‍ನ ಎಸ್.ಜಿ.ಎಸ್.ವೈ ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗೆ ನುಗ್ಗಿ ನಗದು ದೋಚಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.

ನಗರ ಪೊಲೀಸ್ ಠಾಣೆ ಹಾಗೂ ಎ.ಎಸ್.ಪಿ. ಪಕ್ಕದಲ್ಲಿನ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿದ್ದ ಸೆಲೂನ್‍ವೊಂದಕ್ಕೆ ನುಗ್ಗಿದ ಕಳ್ಳರು 18 ಸಾವಿರ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ ಈ ಕಟ್ಟಡದಲ್ಲಿರುವ ಹೋಟೆಲ್, ಶ್ರೀದೇವಿ ಬಿಲ್ಡರ್ಸ್, ಹಿಂದುಸ್ತಾನ್ ಸೇಲ್ಸ್ ಅಂಗಡಿಗೆ ನುಗ್ಗಿ ಕಳವಿಗೆ ವಿಫಲ ಯತ್ನ ನಡೆದಿದೆ. ನಗರ ಠಾಣಾ ಎಸ್.ಐ. ಚಂದ್ರಶೇಖರ್, ಅಪರಾಧ ವಿಭಾಗದ ಎಸ್.ಐ. ಸುಧಾಕರ ತೋನ್ಸೆ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು