Monday, January 20, 2025
ಸುದ್ದಿ

ವಿಟ್ಲ ಪೊಲೀಸ್ ಠಾಣೆಗೆ ಬಂಟ್ವಾಳ ಶಾಸಕರ ದಿಢೀರ್ ಭೇಟಿ! – ಕಹಳೆ ನ್ಯೂಸ್

ವಿಟ್ಲ: ಇತ್ತೀಚೆಗೆ ವಿಟ್ಲದಲ್ಲಿ ನಡೆದ ಅಕ್ರಮ ಗೋಸಾಗಾಟ ತಡೆ ಪ್ರಕರಣದಲ್ಲಿ ವಿಟ್ಲಪಡ್ನೂರು ಗ್ರಾಮದ ಕಡಂಬುವಿನ ಅಮಾಯಕ ಹಿಂದೂ ಯುವಕರನ್ನು ತನಿಖೆಯ ಹೆಸರಿನಲ್ಲಿ ಪೊಲೀಸ್‍ರು ಬಂಧಿಸಿದ್ದು, ಬಂಧನಕ್ಕೊಳಗಾದವರು ನಿರಪರಾಧಿಗಳೆಂದು ಯುವಕರ ಸಂಬಂಧಿಕರು ಬಂಟ್ವಾಳ ಶಾಸಕರ ಗಮನಕ್ಕೆ ತಂದಿದ್ದಾರೆ.

ಇದಕ್ಕೆ ತಕ್ಷಣ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ವಿಟ್ಲ ಠಾಣೆಗೆ ತೆರಳಿ ನಿರಪರಾಧಿಗಳಿಗೆ ಯಾವುದೇ ಕಿರುಕುಳ ನೀಡದಂತೆ ಪೋಲಿಸ್ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ. ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ, ಅಕ್ರಮ ಗೋಸಾಗಟಗಾರರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು