Monday, January 20, 2025
ಸುದ್ದಿ

ಬೆಳೆಯುತ್ತಿರುವ ನಗರಕ್ಕೆ ನೀರು ಎಲ್ಲಿಂದ: ಜಿ ಪರಮೇಶ್ವರ್ ಪ್ರಶ್ನೆ…!? – ಕಹಳೆ ನ್ಯೂಸ್

ಶೀಘ್ರದಲ್ಲೇ ತುಮಕೂರಿಗೆ ನಮ್ಮ ಮೆಟ್ರೋ ಸೇವೆ ದೊರೆಯಲಿದೆ. ಎರಡನೇ ಹಂತದಲ್ಲಿ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ವರೆಗೆ ಮೆಟ್ರೋ ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ ಪ್ರಮೇಶ್ವರ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರ್ಕಾರ ಎರಡನೇ ಹಂತದ ನಗರಗಳಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡುತ್ತಿದ್ದು, ತುಮಕೂರಿನಲ್ಲಿ ಏಷ್ಯಾದಲ್ಲೇ ಅತಿದೊಡ್ಡ ಕೈಗಾರಿಕಾ ವಲಯ ತಲೆ ಎತ್ತಲಿದೆ. ಇದಕ್ಕೆ ಪೂರಕವಾಗಿ ಬೆಂಗಳೂರಿನಿಂದ ತುಮಕೂರಿಗೆ ಮೆಟ್ರೋ ಸೇವೆ ನೀಡಲು ಮುಂದಾಗಿದೆ. ನಮ್ಮ ಮೆಟ್ರೋ ರೈಲು ಮಾರ್ಗ ತುಮಕೂರು ವರೆಗೆ ವಿಸ್ತರಿಸಲು ಯೋಜನೆ ರೂಪಿಸಲಾಗುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗಿರುವ ಕೈಗಾರಿಕಾ ನೀತಿ ಅಂತ್ಯಗೊಳ್ಳುತ್ತಿದ್ದು, 2019-24ರ ಕೈಗಾರಿಕಾ ನೀತಿ ಜಾರಿಗೆ ಸಿದ್ಧತೆ ನಡೆಯುತ್ತಿದ್ದು, ಶೀಘ್ರ ಜಾರಿಗೆ ಬರಲಿದೆ ಎಂದು ಮಾಹಿತಿ ನೀಡಿದರು.  ಅದರ ಜೊತೆಗೆ ಆ ಕಡೆ ಶರಾವತಿ ಇತ್ತ ಎತ್ತಿನಹೊಳೆ ಯೋಜನೆಗೂ ಆಕ್ರೋಶ ವ್ಯಕ್ತವಾಗಿದೆ. ಬೆಂಗಳೂರಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಹೀಗಿರುವಾಗ ಬೆಳಯುತ್ತಿರುವ ನಗರಕ್ಕೆ ನೀರನ್ನು ಎಲ್ಲಿಂದ ತರುವುದು ಎಂದು ಪ್ರಶ್ನೆ ಮಾಡಿದರು. ಈಗಾಗಲೇ ನಮ್ಮ ಮೆಟ್ರೋ ಎರಡನೇ ಹಂತದ ಮಾರ್ಗ ನಿರ್ಮಾಣ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ.