Tuesday, January 21, 2025
ಸುದ್ದಿ

ನೆಕ್ಕಿಲಾಡಿಯಲ್ಲಿ ಜೆಸಿಐನಿಂದ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯಪುಸ್ತಕ ವಿತರಣೆ – ಕಹಳೆ ನ್ಯೂಸ್

ಉಪ್ಪಿನಂಗಡಿ: ಜೆಸಿಐ ನೆಕ್ಕಿಲಾಡಿ ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಕ್ಕಿಲಾಡಿಯ ವಿದ್ಯಾರ್ಥಿಗಳಿಗೆ ಅಗತ್ಯ ಪಠ್ಯಪುಸ್ತಕಗಳನ್ನು ಮತ್ತು ಊಟ ಮಾಡುವ ತಟ್ಟೆಗಳ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ, ಜೆಸಿಐ ನೆಕ್ಕಿಲಾಡಿ ಘಟಕದ ಅಧ್ಯಕ್ಷರಾದ ವಿನೀತ್ ಶಗ್ರಿತ್ತಾಯ ಪಠ್ಯಪುಸ್ತಕಗಳನ್ನು ಮತ್ತು ಒಂದನೇ ತರಗತಿಯ ವಿದ್ಯಾರ್ಥಿಗಳಿಗೆ ಊಟದ ತಟ್ಟೆಗಳನ್ನು ಜೆಸಿಐ ನೆಕ್ಕಿಲಾಡಿಯ ನಿಕಟಪೂರ್ವಾಧ್ಯಕ್ಷೆ ಅಮಿತಾ ಹರೀಶ್ ಕೊಡುಗೆಯಾಗಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜೊತೆಗೆ ನೆಕ್ಕಿಲಾಡಿ ಅಂಚೆ ಕಚೇರಿಯ ಅಂಚೆ ಪಾಲಕರಾಗಿ 24 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ರಮೇಶ್ ಗೌಡ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ರಮೇಶ್ ಗೌಡ ಇವರು ಇದು ನನ್ನ ಪಾಲಿಗೆ ನೆನೆಸದೇ ಬಂದ ಭಾಗ್ಯ. ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ. ತುಂಬಾ ಸಂತೋಷವಾಗುತ್ತಿದೆ. ಅಂಚೆ ಕಚೇರಿಯವರಾದ ನಮ್ಮನ್ನು ಜನರು ಗುರುತಿಸುವುದು ಬಹಳ ಅಪರೂಪ ಅಂಥದ್ದರಲ್ಲಿ ಜೆಸಿಐ ನೆಕ್ಕಿಲಾಡಿ ಘಟಕವು ನಮ್ಮನ್ನು ಗುರುತಿಸಿ ಸನ್ಮಾನಿಸಿದೆ ಎಂದು ಹೇಳಿ, ಜೆಸಿಐ ನೆಕ್ಕಿಲಾಡಿ ಘಟಕದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಖ್ಯ ಅತಿಥಿಯಾಗಿ ಆಗಮಿಸಿದ ನಮ್ಮೂರು ನೆಕ್ಕಿಲಾಡಿ ಸಂಘಟನೆಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಯೂನಿಕ್ ಮಾತನಾಡಿ ಜೆಸಿಐ ನೆಕ್ಕಿಲಾಡಿ ಘಟಕದ ಕಾರ್ಯವನ್ನು ಶ್ಲಾಘಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ನೀತಿ ಕಥೆಯನ್ನು ಹೇಳಿ ನಮ್ಮ ಭವಿಷ್ಯದ ಬಗ್ಗೆ ನಾವು ಹೇಗೆ ದೂರದೃಷ್ಟಿಯಿಂದ ಆಲೋಚಿಸಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿಯಾದ ಸೆವ್ರಿನ್ ಮಾರ್ಟಿಸ್, ನೆಕ್ಕಿಲಾಡಿ ಗ್ರಾಮ ಪಂಚಾಯತಿಯ ನೂತನ ಸದಸ್ಯೆ ಹಾಗೂ ಜೆಸಿಐ ನೆಕ್ಕಿಲಾಡಿ ಘಟಕದ ಉಪಾಧ್ಯಕ್ಷೆಯರಾದ ಜೆಸಿ ಅನಿ ಮಿನೇಜಸ್ ಮತ್ತು ನೆಕ್ಕಿಲಾಡಿ ಗ್ರಾಮ ಪಂಚಾಯತ್ ಸದಸ್ಯೆ ಜೇಸಿ ಸತ್ಯವತಿ ಪೂಂಜಾ, ಹಾಗು ಶಾಲೆಯ ಶಿಕ್ಷಕ ವೃಂದದವರು, ಪುಟಾಣಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.