Tuesday, January 21, 2025
ಸುದ್ದಿ

ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಉಪ್ಪಡ್ ಪಚ್ಚಿಲ್ ಆಯನೊ ಕಾರ್ಯಕ್ರಮ – ಕಹಳೆ ನ್ಯೂಸ್

ಕಲ್ಲಡ್ಕ ಶ್ರೀರಾಮ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನಮಂದಿರದಲ್ಲಿ “ಉಪ್ಪಡ್ ಪಚ್ಚಿಲ್ ಆಯನೊ” ಎಂಬ ತುಳುಕೂಟ ಆಯೋಜಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

“ಉಪ್ಪಡ್ ಪಚ್ಚಿಲ್ ಆರಂಭಿಸಿದವಳು ತಾಯಿ. ಆಕೆಯೇ ಮೊದಲ ವಿಜ್ಞಾನಿ. ಹಲಸಿನ ಹಣ್ಣಿನಲ್ಲಿ ಅಪಾರವಾದ ಪ್ರೋಟಿನ್ ಅಂಶಗಳಿವೆ, ಇದು ಆಹಾರ ಮೌಲ್ಯಗಳ್ನು ಮಾತ್ರವಲ್ಲ, ಔಷಧೀಯ ಅಂಶಗಳನ್ನೂ ಒಳಗೊಂಡಿದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ನಮ್ಮ ಆಹಾರ ಸಂಸ್ಕøತಿಯನ್ನು ಉಳಿಸಬೇಕು” ಎಂದು ಆಹಾರ ಪದಾರ್ಥಗಳಲ್ಲಿ ಹಲಸಿನ ಹಣ್ಣಿನ ಮಹತ್ವ ತಿಳಿಸುತ್ತಾ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|| ಪ್ರಭಾಕರ್ ಭಟ್ ಕಲ್ಲಡ್ಕ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಪ್ರಗತಿಪರ ಕೃಷಿಕರು ರಾಕೋಡಿ ಈಶ್ವರ ಭಟ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಚಂದ್ರಶೇಖರ್ ಸಾಲ್ಯಾನ್, ಸದಸ್ಯರಾದ ಜಯರಾಂ ರೈ, ಡಾ|| ಕಮಲಾ ಪ್ರಭಾಕರ್ ಭಟ್, ಶಾಲಾ ಪೋಷಕರಾದ ಜಯರಾಮ್, ಮಾತೃಭಾರತಿ ಸಮಿತಿಯ ಅಧ್ಯಕ್ಷರಾದ ಅರೋಣೋದಯ ಹಾಗೂ ಶಾಲಾ ಮುಖ್ಯಶಿಕ್ಷಕರಾದ ರವಿರಾಜ್ ಕಣಂತೂರು ಉಪಸ್ಥಿತಿಯಿದ್ದರು.

ಕಾರ್ಯಕ್ರಮವನ್ನು ಅಧ್ಯಾಪಕರರಾದ ಸುಮಂತ್ ಆಳ್ವ ನಿರೂಪಿಸಿ, ಗಾಯತ್ರಿ ಸ್ವಾಗತಿಸಿ, ಸುಮಿತ್ರ ವಂದಿಸಿದರು.