Tuesday, January 21, 2025
ಸುದ್ದಿ

ವೈದ್ಯ ಸಾಹಿತಿ ಡಾ ಮುರಲೀ ಮೋಹನ್ ಚೂಂತಾರು ಅವರ 9ನೇ ಕೃತಿ ಧನ್ವಂತರಿ ವೈದ್ಯಕೀಯ ಲೇಖನ ಬಿಡುಗಡೆ ಸಮಾರಂಭ – ಕಹಳೆ ನ್ಯೂಸ್

ಖ್ಯಾತ ದಂತ ವೈದ್ಯ, ಬಾಯಿ, ದವಡೆ ಮತ್ತು ಶಸ್ತ್ರ ಚಿಕಿತ್ಸಕರು ಮತ್ತು ವೈದ್ಯ ಸಾಹಿತಿ ಡಾ ಮುರಲೀ ಮೋಹನ್ ಚೂಂತಾರು ಇವರ 9ನೇ ಕೃತಿ ಧನ್ವಂತರಿ ವೈದ್ಯಕೀಯ ಲೇಖನ ನಾಳೆ (30.6-.2019) ಸಂಜೆ 7.30ಕ್ಕೆ ನಗರದ ಮಯಾ ಇಂಟರ್ ನ್ಯಾಶನಲ್ ಹೋಟೆಲ್‍ನ ಸಭಾಂಗಣದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಕರ್ನಾಟಕ ಸರಕಾರದ ಮಾಜಿ ಸಚಿವರಾದ ರಮಾನಾಥ ರೈ ಇವರು ಈ ಪುಸ್ತಕವನ್ನು ಲೋಕರ್ಪಣೆ ಮಾಡಲಿದ್ದಾರೆ. ನಿಟ್ಟೆ ವಿಶ್ವ ವಿದ್ಯಾಲಯದ ಉಪಕುಲಾಧಿಪತಿ ಪ್ರೊಫೆಸರ್ ಡಾ. ಶಾಂತರಾಮ್ ಶೆಟ್ಟಿ ಇವರ ಉಪಸ್ಧಿತಿಯಲ್ಲಿ ಪ್ರದೀಪ್ ಕುಮಾರ್ ಕಲ್ಕುರ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ ದ.ಕ ಜಿಲ್ಲೆಯ ಇವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಚೂಂತಾರು ಸರೋಜಿನಿ ಪ್ರತಿಷ್ಠಾನ ಮಂಗಳೂರು ಇದರ ಟ್ರಸ್ಠಿ ಮಹೇಶ್ ಚೂಂತಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು