Thursday, January 23, 2025
ಸುದ್ದಿ

ಫಿಲೋಮಿನಾ ಬಿಸಿಎ ವಿಭಾಗದಲ್ಲಿ ಸ್ವಾಗತ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿಗಳು ಸ್ಪಷ್ಟ ಗುರಿ ಹೊಂದುವುದರೊಂದಿಗೆ ಗುರು ವೃಂದದವರ ಮಾರ್ಗದರ್ಶನವನ್ನು ಜೀವನದುದ್ದಕ್ಕೂ ಅಳವಡಿಸಿಕೊಳ್ಳುವ ಸತ್‍ಸಂಪ್ರದಾಯವನ್ನು ಹೊಂದಿದಾಗ ಭವಿಷ್ಯವು ಫಲಪ್ರದವೆನಿಸುವುದು ಎಂದು ಸಂತ ಫಿಲೋಮಿನಾ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಹೇಳಿದರು.

ಅವರು ಕಾಲೇಜಿನ ಬಿಸಿಎ ವಿಭಾಗದ ಆಶ್ರಯದಲ್ಲಿ ಜೂನ್ 26 ರಂದು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು. ಉನ್ನತ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳು ಆಯ್ದುಕೊಳ್ಳುವ ವಿಷಯದ ಕುರಿತು ಪರಿಣತಿಯನ್ನು ಹೊಂದುವ ಕುರಿತು ಸತತ ಪ್ರಯತ್ನವನ್ನು ನಡೆಸಬೇಕು. ಭವಿಷ್ಯದ ಸವಾಲುಗಳನ್ನು ಎದುರಿಸುವ ಉದ್ದೇಶದಿಂದ ಪದವಿ ಹಂತದ ಮೂರು ವರ್ಷಗಳ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ದೊರೆಯಬೇಕಾದರೆ ಪ್ರಯತ್ನ, ನಿಷ್ಠೆ ಮತ್ತು ಶ್ರಮದಿಂದ ಮಾತ್ರ ಸಾಧ್ಯ. ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಶೈಕ್ಷಣಿಕ ರಂಗದಲ್ಲಿ ವಿಶೇಷ ಸಾಧನೆಗೈದ ದ್ವಿತೀಯ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ವಿನಯಚಂದ್ರ, ಪಿನ್ಯಾಕಲ್ ಐಟಿ ಕ್ಲಬ್‍ನ ಸಂಯೋಜಕಿ ರಾಜೇಶ್ವರಿ ಎಮ್, ವಿದ್ಯಾರ್ಥಿ ಪ್ರತಿನಿಧಿಗಳಾದ ವೈಷ್ಣವಿ ಮತ್ತು ಚಂದ್ರಾಕ್ಷ ಉಪಸ್ಥಿತರಿದ್ದರು.

ವಿದ್ಯಾ ಎಸ್ ಎಮ್ ಸ್ವಾಗತಿಸಿದರು. ನೀಲಮ್ ಕುಟ್ಟಪ್ಪ ವಂದಿಸಿದರು. ರಿಚಾ ಜಿವೆಲ್ ಡಿ’ಕೋಷ್ಟ ಕಾರ್ಯಕ್ರಮ ನಿರೂಪಿಸಿದರು.