Monday, November 25, 2024
ಸುದ್ದಿ

ಫಿಲೋಮಿನಾದಲ್ಲಿ ವಿಶ್ವ ಪರಿಸರ ದಿನಾಚರಣೆ – ಕಹಳೆ ನ್ಯೂಸ್

ಪುತ್ತೂರು: ಕೇವಲ ದಿನಾಚರಣೆಯಿಂದ ಮೂಲ ಉದ್ದೇಶ ಈಡೇರಲಾರದು. ನಾವು ಖ್ಯಾತ ನಟ ನಟಿಯರ ವೇಷ ಭೂಷಣಗಳನ್ನು ಅನುಕರಣೆ ಮಾಡಲು ಪ್ರಯತ್ನಿಸುತ್ತೇವೆ. ಪರಿಸರ ಸಂರಕ್ಷಣೆಯಲ್ಲಿ ಶ್ರೇಷ್ಠ ಮಟ್ಟದ ಸಾಧನೆ ಮಾಡಿ, ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಸಾಲು ಮರ ತಿಮ್ಮಕ್ಕನಂತವರ ಧೋರಣೆಯನ್ನು ಅಳವಡಿಸಿಕೊಳ್ಳಬೇಕು. ಆಗ ಮುಂದಿನ ಪೀಳಿಗೆ ನೆಮ್ಮದಿಯಿಂದ ಜೀವಿಸಲು ಸಾಧ್ಯ ಎಂದು ಪುತ್ತೂರು ವಲಯಾರಣ್ಯಧಿಕಾರಿ ಮೋಹನ್ ಕುಮಾರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಂತ ಫಿಲೋಮಿನಾ ಕಾಲೇಜಿನ ಎನ್‍ಸಿಸಿ, ಎನ್‍ಎಸ್‍ಎಸ್, ರೋವರ್ಸ್-ರೇಂಜರ್ಸ್, ಪರಿಸರ ಸಂಘ ಮತ್ತು ಯೂತ್ ರೆಡ್ ಕ್ರಾಸ್ ಘಟಕದ ಸಹಭಾಗಿತ್ವದಲ್ಲಿ ಕಾಲೇಜು ಕ್ರೀಡಾಂಗಣದ ಬಳಿ ಜೂನ್ 29 ರಂದು ಆಯೋಜಿಸಲಾದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡಿದರು. ನಮ್ಮ ದೇಶದ ಭೌಗೋಳಿಕ ವಿಸ್ತೀರ್ಣ ಸ್ಥಿರವಾಗಿದೆ. ಜನಸಂಖ್ಯೆಯು ವಿಪರೀತ ಏರುತ್ತಿದೆ. ಜನಸಂಖ್ಯೆಯಲ್ಲಿ ಮುಂದೊಂದು ದಿನ ಚೀನಾವನ್ನೂ ಮೀರಿಸುವ ಸಾಧ್ಯತೆಯಿದೆ. ಅರಣ್ಯ ನಾಶಗೊಳಿಸಿ ಕಾಂಕ್ರಿಟ್ ಕಟ್ಟಡ ನಿರ್ಮಾಣದ ಮೋಹ ಜನರಲ್ಲಿ ಹೆಚ್ಚುತ್ತಿದೆ. ಮರ ಗಿಡಗಳನ್ನು ಮನೆಯ ಸುತ್ತ ಮುತ್ತ ಸಾಕಷ್ಟು ಬೆಳೆಸಿದಲ್ಲಿ ಹವಾನಿಯಂತ್ರಣದ ವ್ಯವಸ್ಥೆಯೇ ಅಗತ್ಯವಿಲ್ಲ. ಪರಿಸರ ಸಮತೋಲನದ ದೃಷ್ಟಿಯಲ್ಲಿ ಹುಲ್ಲು ಸಹ ಮುಖ್ಯ. ಯುವಜನತೆ ಪರಿಸರ ಉಳಿಸಿ, ಸ್ವಚ್ಛತೆಯನ್ನು ಕಾಪಾಡಿ ಅನ್ನುವ ಧ್ಯೇಯ ವಾಕ್ಯವನ್ನು ಕಾರ್ಯ ರೂಪಕ್ಕೆ ತರುವಲ್ಲಿ ಕಂಕಣಬದ್ಧರಾಗಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಪರಿಸರ ಇಲ್ಲದಿದ್ದರೆ ಮಾನವ ಶಕ್ತಿಯೇ ಇರಲಾರದು. ಯುವ ಸಮುದಾಯದಲ್ಲಿ ಹಸಿರು ಮತ್ತು ಸ್ವಚ್ಛ ಪರಿಸರದ ಕುರಿತು ಜಾಗೃತಿ ಮೂಡಿಸುವುದೇ ವಿಶ್ವ ಪರಿಸರ ದಿನಾಚರಣೆಯ ಮುಖ್ಯ ಉದ್ದೇಶ. ಪರಿಸರ ಸಮತೋಲನವನ್ನು ಕಾಪಾಡುವ ಉದ್ದೇಶದಿಂದ ಜನಸಂಖ್ಯೆ ಬೆಳವಣಿಗೆಯ ನಿಯಂತ್ರಣದ ಅನಿವಾರ್ಯತೆಯಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಉಪವಲಯಾರಣ್ಯಧಿಕಾರಿಗಳಾದ ಕುಮಾರ ಸ್ವಾಮಿ, ಲೋಕೇಶ್, ಬಿ, ಟಿ. ಪ್ರಕಾಶ್ ಭಾಗವಹಿಸಿದರು. ಕಾಲೇಜಿನ ಎನ್‍ಸಿಸಿ ಅಧಿಕಾರಿ ಲೆ. ಜೋನ್ಸನ್ ಡೇವಿಡ್ ಸಿಕ್ವೇರಾ, ಎನ್‍ಎಸ್‍ಎಸ್ ಅಧಿಕಾರಿ ಶಶಿಪ್ರಭ ಬಿ, ರೋವರ್ಸ್-ರೇಂಜರ್ಸ್ ಸಂಯೋಜಕರಾದ ಧನ್ಯ ಪಿ. ಟಿ, ಪರಿಸರ ಸಂಘದ ಸಂಯೋಜಕರಾದ ನಾಗರಾಜು ಎಮ್, ರಕ್ಷಿತಾ ಆರ್ ಬಿ ಮತ್ತು ಸ್ಮಿತಾ ವಿವೇಕ್ ಮುಂತಾದವರು ಸಹಕರಿಸಿದರು.

ಎನ್‍ಎಸ್‍ಎಸ್ ಕಾರ್ಯಕ್ರಮಾಧಿಕಾರಿ ದಿನಕರ ಅಂಚನ್ ಸ್ವಾಗತಿಸಿ, ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜಕಿ ವೆಂಕಟೇಶ್ವರಿ ಕೆ ಎಸ್ ವಂದಿಸಿದರು.