Highlights
ದೀಪಕ್ ರಾವ್ ಮೃತದೇಹವನ್ನು ಗೌಪ್ಯವಾಗಿ ಶವಾಗಾರದಿಂದ ಸಾಗಿಸಿದ್ದಕ್ಕೆ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳೂರು (ಜ.04): ದೀಪಕ್ ರಾವ್ ಮೃತದೇಹವನ್ನು ಗೌಪ್ಯವಾಗಿ ಶವಾಗಾರದಿಂದ ಆ್ಯಂಬುಲೆನ್ಸ್ ಮೂಲಕ ಮನೆಗೆ ಸಾಗಿಸಿದ್ದಕ್ಕೆ ಸರ್ಕಾರದ ವಿರುದ್ಧ ಹಿಂದೂ ಸಂಘಟನೆಗಳು, ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಜ
ಎಡಿಜಿಪಿ ಕಮಲ್ ಪಂಥ್ ಜೊತೆ ಹಿಂದೂ ಮುಖಂಡರ ಮಾತುಕತೆ ವಿಫಲವಾಗಿದೆ. ಸ್ಥಳಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ತಕ್ಷಣ ಆಗಮಿಸಬೇಕು. ದೀಪಕ್ ಕುಟುಂಬದ ನೋವು ಆಲಿಸಿ ಪರಿಹಾರ ಕೊಡಬೇಕು. ಮನೆಯವರ ಅನುಮತಿಯಿಲ್ಲದೆ ಸರ್ಕಾರ ಪೊಲೀಸರ ಮೂಲಕ ಶವ ಸಾಗಿಸಿದೆ. ಈ ಮೂಲಕ ಸರ್ಕಾರ ಕುಟುಂಬದ ಸದಸ್ಯರಿಗೆ ಅಗೌರವ ತೋರಿದೆ. ಅಲ್ಲದೆ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು. ಗೃಹ ಮಂತ್ರಿಗಳೇ ಆಗಮಿಸಿj ಪರಿಹಾರದ ಚೆಕ್ ನೀಡಬೇಕು. ಅಲ್ಲಿಯವರೆಗೆ ಯಾವುದೇ ಕಾರಣಕ್ಕೂ ಸ್ಥಳದಿಂದ ಕದಲುವುದಿಲ್ಲ ಎಂದು ಸಂಘ ಪರಿವಾರದವರು ಪಟ್ಟು ಹಿಡಿದಿದ್ದಾರೆ.
ಹಿಂದೂ ಸಂಘಟನೆ ಮುಖಂಡರೊಂದಿಗೆ ಎಡಿಜಿಪಿ ಕಮಲ್ ಪಂತ್, ಪೊಲೀಸ್ ಆಯುಕ್ತ ಸುರೇಶ್ ಮಾತುಕತೆ ನಡೆಸಿದ್ದು, ಆದರೆ ಅವರು ಪಟ್ಟು ಸಡಿಲಿಸುತ್ತಿಲ್ಲ. ಗೃಹ ಸಚಿವರು ಸ್ಥಳಕ್ಕೆ ಬರಬೇಕೆಂದು ಹಿಂದೂ ಸಂಘಟನೆಗಳj ಆಗ್ರಹಿಸಿವೆ. ಎಜೆ ಆಸ್ಪತ್ರೆಗೆ ಶವ ವಾಪಸ್ ತೆಗೆದುಕೊಂಡು ಹೋಗಬೇಕು. ಆಸ್ಪತ್ರೆಯಿಂದ ಮೆರವಣಿಗೆ ಮೂಲಕ ಶವ ತರಬೇಕು ಎಂದು ಪೊಲೀಸರಿಗೆ ಗ್ರಾಮಸ್ಥರು ಹಾಗೂ ಪೋಷಕರ ಒತ್ತಾಯಿಸಿದ್ದಾರೆ.