Thursday, January 23, 2025
ಸುದ್ದಿ

ಪುತ್ತೂರಿನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಕನಸಿಗೆ ಮರುಜೀವ!! – ಕಹಳೆ ನ್ಯೂಸ್

ಪುತ್ತೂರು : ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸಲು ಪುತ್ತೂರು ಸಮೀಪದ ಕಬಕ ಗ್ರಾಮದಲ್ಲಿ ಈ ಹಿಂದೆಯೇ ಗುರುತಿಸಲ್ಪಟ್ಟಿದ್ದ 25 ಎಕರೆ ಸರಕಾರಿ ಜಮೀನು ನೀಡಲು, ಇದೀಗ ಜಿಲ್ಲಾಧಿಕಾರಿ ಮಟ್ಟದಲ್ಲಿ ಒಪ್ಪಿಗೆ ದೊರೆತಿದ್ದು, ಜಮೀನು ನೀಡಿದಲ್ಲಿ ಅದರ ಬಳಕೆ ಬಗ್ಗೆ ಖಾತರಿ ಪಡಿಸುವ ನಿಟ್ಟಿನಲ್ಲಿ ಉದ್ದೇಶಿತ ಕಾಮಗಾರಿಯ ನೀಲ ನಕಾಶೆ ಸಹಿತ ಇತರೆ ವಿವರ ಸಲ್ಲಿಸುವಂತೆ ಕಂದಾಯ ಇಲಾಖೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‍ಗೆ ಪತ್ರ ಮುಖೇನ ತಿಳಿಸಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಸ್ಟೇಡಿಯಂ ನಿರ್ಮಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಜಾಗ ನೀಡುವಂತೆ ಬೇಡಿಕೆ ಸಲ್ಲಿಸಿತ್ತು. ಪುತ್ತೂರು ನಗರ ಕೇಂದ್ರದಿಂದ ಐದು ಕಿ.ಮೀ. ದೂರದಲ್ಲಿರುವ ನಗರಸಭಾ ವ್ಯಾಪ್ತಿಯ ಕಬಕ ಗ್ರಾಮದ ಸರ್ವೆ ನಂಬರ್ 260/1 ಪಿ1ರಲ್ಲಿ 25 ಎಕರೆ ಸರಕಾರಿ ಜಮೀನನ್ನು ಕ್ರೀಡಾಂಗಣಕ್ಕೆ ಗುರುತಿಸಲಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

2017ರ ಜು. 22ರಂದು ಕೆಎಸ್‍ಸಿಎ ಕಾರ್ಯದರ್ಶಿ ಆರ್. ಸುಧಾಕರ್ ರಾವ್ ಅವರು ಕ್ರೀಡಾಂಗಣಕ್ಕಾಗಿ ಪುತ್ತೂರಿನಲ್ಲಿ 25 ಎಕರೆ ಸರಕಾರಿ ಜಾಗ ದೀರ್ಘಾವಧಿ ಗುತ್ತಿಗೆ ಆಧಾರದಲ್ಲಿ ನೀಡುವಂತೆ ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದರು. ಅನಂತರ ಕಂದಾಯ ಇಲಾಖೆ ಜಮೀನು ಗುರುತಿಸಿತ್ತು. ಈ ಜಾಗ ನಗರಸಭೆ ವ್ಯಾಪ್ತಿಗೆ ಒಳಪಡುವ ಕಾರಣ 2017 ಸೆ. 28ರಂದು ಅಂದಿನ ತಹಶೀಲ್ದಾರ್ ಪುತ್ತೂರು ನಗರಸಭೆಗೆ ಪತ್ರ ಬರೆದು, ಕೆಎಸ್‍ಸಿಎಗೆ ಗುತ್ತಿಗೆ ಆಧಾರದಲ್ಲಿ ನೀಡುವ ಬಗ್ಗೆ ನಿರಾಕ್ಷೇಪಣ ಪತ್ರ ನೀಡುವಂತೆ ಮನವಿ ಮಾಡಿದ್ದರು. ನಗರಸಭೆ ಸಾಮಾನ್ಯ ಸಭೆಗಳಲ್ಲಿ ಚರ್ಚೆ ನಡೆದು ಪರ-ವಿರೋಧ ಅಭಿಪ್ರಾಯ ವ್ಯಕ್ತವಾಗಿ ಕೊನೆಗೆ 2018 ಜನವರಿಯಲ್ಲಿ ನಗರಸಭೆ ಎನ್‍ಒಸಿ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು