Thursday, January 23, 2025
ಸುದ್ದಿ

ಬಡ ಕುಟುಂಬಕ್ಕೆ ಅಸರೆಯಾದ ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ – ಕಹಳೆ ನ್ಯೂಸ್

ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದಲ್ಲಿ ವಾಸವಾಗಿರುವ ದೇವಪ್ಪ ನಾಯ್ಕ ಮತ್ತು ರತ್ನಾವತಿಯವರು ತುಂಬಾ ಬಡತನದಿಂದ ಜೀವನ ಸಾಗಿಸುತ್ತಿರುವ ಕುಟುಂಬವಾಗಿದೆ. ದೇವಪ್ಪ ಇವರಿಗೆ ನಾಲ್ಕು ವರ್ಷಗಳ ಹಿಂದೆ ತೆಂಗಿನ ಮರದಿಂದ ಬಿದ್ದು ನಡೆಯಲು ಕಷ್ಟ ಇವರು ಬೀಡಿ ಕಟ್ಟಿ ಜೀವನ ಸಾಗಿಸುತ್ತ ಇದ್ದು ಪಂಚಾಯಿತಿ ನೆರವಿನಿಂದ ಮನೆ ನಿರ್ಮಾಣ ಕಾರ್ಯ ಅರ್ಧ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದಾಗಿ ಬೇಸತ್ತ ಕುಟುಂಬಕ್ಕೆ ಈಗ ನೆರವಿನ ಹಸ್ತ ಬೇಕಾಗಿದ್ದು ದಕ್ಷಿಣ ಕನ್ನಡ ಜಿಲ್ಲಾ ಮರಾಟಿ ಸಂರಕ್ಷಣಾ ಸಮಿತಿ (ರಿ) ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗಿದೆ. ಜಿಲ್ಲಾ ಅಧ್ಯಕ್ಷರು ದೇವಪ್ಪ ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ವರ್ಷದಿಂದ ಅಂಗವಿಕಲ ಸರ್ಟಿಫಿಕೇಟ್‍ಗಾಗಿ ಅಲೆದಾಡುತಿದ್ದ ಕುಟುಂಬಕ್ಕೆ ಎರಡೇ ದಿವಸದಲ್ಲಿ ಅಂಗವಿಕಲ ಸರ್ಟಿಫಿಕೇಟ್ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ಇಂದು ಬಡ ಬದುಕಿನ ಜೀವನದಲ್ಲಿ ಖುಷಿಯ ಸಮಯ ತಂದಿರುವುದಂತೂ ಸುಳ್ಳಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು