Monday, November 25, 2024
ಸುದ್ದಿ

Big Breaking : ಮಂಗಳೂರಿನಲ್ಲಿ ರನ್ ವೇಯಿಂದ ಜಾರಿದ ಏರ್ ಇಂಡಿಯಾ ವಿಮಾನ ; ಏರ್ ಪೋರ್ಟ್ ನಲ್ಲಿ ತಪ್ಪಿದ ಭಾರೀ ದುರಂತ..! – ಕಹಳೆ ನ್ಯೂಸ್

ಮಂಗಳೂರು: ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ಕೊದಲೆಲೆ ಅಂತರದಲ್ಲಿ ತಪ್ಪಿದ್ದು, ಕೊಂಚ ಎಡವಟ್ಟಾಗಿದ್ದರೂ 2010ರ ವಿಮಾನ ದುರಂತ ಘಟನೆಗೆ ಮಂಗಳೂರು ಮತ್ತೆ ಸಾಕ್ಷಿಯಾಗುತ್ತಿತ್ತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ರನ್ ವೇನಿಂದ ಜಾರಿ ಸಾಕಷ್ಟು ಮುಂದೆ ಬಂದು ಲ್ಯಾಂಡ್ ಆಗಿದೆ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಏರ್ ಇಂಡಿಯಾ ವಿಮಾನ ಇದಾಗಿದ್ದು, ಪೈಲೆಟ್ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ ತಪ್ಪಿದೆ. ಸದ್ಯ ಮಂಗಳೂರು ವಿಮಾನ ನಿಲ್ದಾಣದ ಎಲ್ಲಾ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ವಿಮಾನ ಹಾರಾಟ ಮತ್ತು ಆಗಮನ ಸ್ಥಗಿತಗೊಳಿಸಲಾಗಿದೆ. ರನ್ ವೇ ದಾಟಿ ಸಾಕಷ್ಟು ಎದುರು ಬಂದು ವಿಮಾನ ಲ್ಯಾಂಡಿಂಗ್ ಆಗಿದ್ದು, ದುರಂತ ತಪ್ಪಿದ ಹಿನ್ನೆಲೆ 183 ಪ್ರಯಾಣಿಕರು ನಿಟ್ಟುಸಿರು ಬಿಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು