Recent Posts

Sunday, January 19, 2025
ಸಿನಿಮಾ

ಮುಸಲ್ಮಾನಳೆಂಬ ಕಾರಣಕ್ಕೆ ಬಾಲಿವುಡ್ ತ್ಯಜಿಸಿದ ಉದಯೋನ್ಮುಖ ನಟಿ…!!-ಕಹಳೆ ನ್ಯೂಸ್

ಭಾರತೀಯ ಚಿತ್ರರಂಗದ ಅತೀ ಹೆಚ್ಚುಗಳಿಕೆಯ ಚಿತ್ರಗಳಾದ ‘ದಂಗಲ್’ ಮತ್ತು ‘ಸೀಕ್ರೆಟ್ ಸೂಪರ್ ಸ್ಟಾರ್ ಚಿತ್ರದ ನಟಿ ‘ಝೈರಾ ವಾಸಿಂ’ ಈಗ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು ಐದು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದ ಕಾಶ್ಮಿರಿ ಮೂಲದ ಝೈರಾ ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಇದೀಗ ಬರೆದುಕೊಂಡಿದ್ದಾರೆ. ಚಿತ್ರ ಜಗತ್ತು ನನಗೆ ಸಂತಸ ತಂದಿಲ್ಲ. ನಂಬಿಕೆ ಹಾಗೂ ಧರ್ಮದ ಮೇಲೆ ಹಸ್ತಕ್ಷೇಪ ಮಾಡುತ್ತದೆ. ಈ ಕಾರಣದಿಂದ ನಾನು ಚಿತ್ರರಂಗ ತೊರಿಯುವ ನಿರ್ಧಾರ ಮಾಡಿದ್ದೀನಿ” ಎಂದು ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಾನು ಬಾಲಿವುಡ್ ನಲ್ಲಿ ಹೆಜ್ಜೆ ಇಟ್ಟಾಗ ಅಪಾರ ಜನಪ್ರಿಯತೆ ಸಿಕ್ಕಿತು. ಸಾರ್ವಜನಿಕರನ್ನು ಗಮನ ಸೆಳೆಯುವ ಪ್ರಧಾನ ಆಕರ್ಷಣೆ ಆಗಿದ್ದೆ. ಇದರಿಂದ ಯುವಜನತೆಗೆ ಮಾದರಿಯಾಗಿ ಗುರುತಿಸಲಾಯಿತು ಎಂದು ದೀರ್ಘವಾದ ಬರವಣಿಗೆಯ ಮೂಲಕ ಚಿತ್ರರಂಗ ಬಿಡುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ..